ಬಿಗ್ ಬಾಸ್ ಮನೆಯಲ್ಲಿ ನಿಯಮ ಉಲ್ಲಂಘಿಸಿ ಸ್ಪರ್ಧಿ ಗಿಲ್ಲಿ ಮೇಲೆ ರಿಷಾ ಗೌಡ ಕೈ ಮಾಡಿದ ಕಾರಣ, ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಸ್ಪರ್ಧಿಗಳ ಮೇಲೆ ಕೈ ಎತ್ತುವುದು ನಿಯಮಕ್ಕೆ ವಿರುದ್ಧವಾಗಿದ್ದು, ಈ ತಪ್ಪಿಗೆ ರಿಷಾ ಅವರನ್ನು ಮನೆಯಿಂದ ಹೊರಗೆ ಹಾಕಬೇಕೇ ಎಂದು ನಿರ್ಧರಿಸುವ ಜವಾಬ್ದಾರಿಯನ್ನು ರೆಡ್ ಕಾರ್ಡ್ ನೀಡುವ ಮೂಲಕ ಇತರ ಸ್ಪರ್ಧಿಗಳಿಗೆ ವಹಿಸಿದ್ದಾರೆ. ಹೀಗಾಗಿ, ರಿಷಾ ಗೌಡ ಅವರು ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆ ಇದೆ.




