ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ರವೀಂದ್ರನಾಥ ಠಾಗೂರ್ ಪೂರ್ವಜರ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಠಾಗೋರ್ ಅವರ ಪೂರ್ವಜರ ಮನೆ ಇದೀಗ ವಸ್ತುಸಂಗ್ರಹಾಲಯವಾಗಿದ್ದು, ಅದರ ಮೇಲೆ ದಾಳಿ ನಡೆದಿದೆ. ವಸ್ತುಸಂಗ್ರಹಾಲಯದ ಸಿಬ್ಬಂದಿ & ಸಂದರ್ಶಕ ಶಾ ನೇವಾಜ್ ನಡುವೆ ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಇದರ ಸೇಡಿಗೆ ದಾಳಿ ನಡೆಸಿದೆ. ಸದ್ಯ ದಾಳಿಗೆ ಸಂಬಂಧಿಸಿ 60 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.




