ಉಪ್ಪಳ: ಭಜನಾ ಮಂದಿರದಿAದ ಕಾಣಿಕೆ ಹುಂಡಿಯನ್ನೇ ಕಳವುಗೈದ ಘಟನೆ ನಡೆದಿದೆ. ಅಟ್ಟೆಗೋಳಿ ವಿಷ್ಣುನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಿoದ ಕಾಣಿಕೆ ಹುಂಡಿಯನ್ನು ಕಳವುಗೈಯ್ಯಲಾಗಿದೆ. ಸುಮಾರು ೧೦ ಸಾವಿರ ರೂ ಹುಂಡಿಯಲ್ಲಿ ಇತ್ತೆಂದು ಅಂದಾಜಿಸಲಾಗಿದೆ. 27.6.2024 ಸಂಜೆ ೬.೨೦ರ ವೇಳೆ ದೀಪ ಹಚ್ಚಲು ಸದಾನಂದ ಗುರುಸ್ವಾಮಿ ಮಂದಿರಕ್ಕೆ ತಲುಪಿದಾಗ ಕಬ್ಬಿಣದ ಕಾಣಿಕೆ ಹುಂಡಿ ನಾಪತ್ತೆಯಾಗಿತ್ತು. ಮುಂಜಾನೆ ಕಳವು ಕೃತ್ಯ ನಡೆದಿರ ಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂದಿರ ಸಮಿತಿ ಅಧ್ಯಕ್ಷ ಸನತ್ ಕುಮಾರ್ ರೈ, ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.