ಕಾಡಬೆಟ್ಟು ಒಕ್ಕೂಟದ ವತಿಯಿಂದ ಅಟಿದ ಲೇಸ್ ಕಾರ್ಯಕ್ರಮ

Share with

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ವಗ್ಗ ವಲಯದ ಕಾಡಬೆಟ್ಟು ಒಕ್ಕೂಟದ ವತಿಯಿಂದ ಅಟಿದ ಲೇಸ್ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡಬೆಟ್ಟು ವಗ್ಗ ಇಲ್ಲಿ ಜರಗಿತು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ದೀಪ ಬೆಳಗಿಸಿ ಚೆನ್ನೆಮನೆ ಆಟ ಆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ ಹಿಂದಿನ ಕಾಲದ ಜೀವನ ಪದ್ಧತಿಯನ್ನು ಮೆಲುಕು ಹಾಕಿ. ಹಿಂದಿನ  ಕಾಲದಲ್ಲಿ ಬಡತನದ ಮೂಲಕ ಸಂತೋಷದಿಂದ ಜೀವನ ಮಾಡುತ್ತಿದ್ದರು, ಆದರೆ ಈಗ ಎಲ್ಲರೂ ಬಡತನದಿಂದ ಹೊರಗಡೆ ಬಂದಿದ್ದಾರೆ ಆದರೆ  ಸಂತೋಷದ, ಆರೋಗ್ಯವಂತ ಜೀವನ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳ ಪಡೂರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಅಮೀನ್  ವಹಿಸಿದ್ದರು

ಆಟಿ ತಿಂಗಳ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಗ್ಗ ದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಮಾತನಾಡಿ ಹಿಂದಿನ ಆಟಿ ತಿಂಗಳಿಗೂ ಇವಾಗಿನ ಆಟಿ ತಿಂಗಳಿಗೂ ಬಹಳ ವ್ಯತ್ಯಾಸವಿದೆ, ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಪರಿಸರದಲ್ಲಾಗುವ ಅಸಮತೋಲನ ದಿಂದಾಗಿ ಬರುವ ರೋಗರುಜಿನಗಲನ್ನು ತಡೆಗಟ್ಟಲು ಪ್ರಕೃತಿದತ್ತವಾದ ಆಹಾರ ಪದ್ಧತಿಗಳನ್ನು ಅನುಕರಣೆ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಏನೇ ಆರೋಗ್ಯ ಸಮಸ್ಯೆ ಎದುರಾದರೂ ಆಸ್ಪತ್ರೆ ಭೇಟಿ ನೀಡುವಂತಾಗಿದೆ. ಈ ಮುಖೇನ ಆಟಿಕೂಟಗಳನ್ನು ಮಾಡಿ  ಜನರಿಗೆ ನಮ್ಮ ಆಹಾರ ಪದ್ಧತಿಯ ಮನವರಿಕೆ ಮಾಡುವ ಅವಶ್ಯಕತೆ ಇದೆ ಎಂದರು.  

ಕಾರ್ಯಕ್ರಮದ ವೇದಿಕೆಯಲ್ಲಿ ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾಡಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಜಾನನ ಭಟ್, ಕಾಡಬೆಟ್ಟು ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಕುಮಾರಿ ಯು, ಬಂಟ್ವಾಳ ತಾಲೂಕು ಶೌರ್ಯ ವೀಪತು ನಿರ್ವಹಣಾ ಘಟಕದ  ಮಾಸ್ಟರ್  ಪ್ರಕಾಶ್, ಕಾಡಬೆಟ್ಟು ಒಕ್ಕೂಟದ ಮಾಜಿ ಅಧ್ಯಕ್ಷರಾದ ಚಂದಪ್ಪ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಡಬೆಟ್ಟು ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರುಗಳು, ಶೌರ್ಯ ವೀಪತು ನಿರ್ವಹಣೆ ಘಟಕ ವಗ್ಗದ ಪ್ರತಿನಿಧಿ ಪ್ರವೀಣ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು
ರೇಖಾ ಪಿ ಪ್ರಾರ್ಥಿಸಿ,, ಲೀಲಾವತಿ ಸ್ವಾಗತಿಸಿ, ತಾರನಾಥ ಶೆಟ್ಟಿ ವಂದಿಸಿ, ಗಣೇಶ್ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
[17/08, 20:44] +91 95910 14861: *ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು*- *ಮಂಜುನಾಥನ್ ಎಂ.ಜಿ*


ದೇಶದ ಭವಿಷ್ಯವು ಯುವಶಕ್ತಿಯ ಕೈಯಲ್ಲಿದೆ. ನಾವು ನಿತ್ಯ ಬಳಸುವ ಬೆಲೆಬಾಳುವ ವಸ್ತುಗಳಿಗಿಂತಲೂ  ಅಮೂಲ್ಯವಾದದು ಯುವಶಕ್ತಿ. ಯುವ ಮನಸ್ಸುಗಳಿಗೆ ಸರಿಯಾದ ದಾರಿ ಮತ್ತು ಮಾರ್ಗದರ್ಶನವನ್ನು ನೀಡಿದರೆ ಅವರೇ ಆಸ್ಥಿಯಾಗುತ್ತಾರೆ. ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮವೇ ಶ್ರೇಷ್ಠವಾದದ್ದು. ವ್ಯಕ್ತಿ ಗೌರವ, ಸ್ನೇಹ,ವಿಶ್ವಾಸದ ಒಳ್ಳೆಯ ನಡೆನುಡಿಯ ಮೂಲಕ ಶ್ರೇಷ್ಠ ವ್ಯಕ್ತಿತ್ವವನ್ನು ನಿರ್ಮಾಣ ಮಾಡಬಹುದು. ನಾರಾಯಗುರುಗಳ ಚಿಂತನೆ ಯುವಸಮುದಾಯಕ್ಕೆ ಚೈತನ್ಯವನ್ನು  ತುಂಬುವ ಕೆಲಸವನ್ನು ಮಾಡುತ್ತದೆ. ಎಲ್ಲರೊಳಗೊಂದಾಗಿ, ಒಳ್ಳೆಯ ಮನುಷ್ಯರಾಗಿ ಬದುಕುವುದು ನಾರಾಯಣ ಗುರು ಚಿಂತನೆಯ ಆಶಯವಾಗಿದೆ.   ಯುವ ಪೀಳಿಗೆಗೆ ನಮ್ಮ ದೇಶದ ಸಂತರ ರಾಷ್ಟ್ರೀಯ ಹೋರಾಟಗಾರರ ಚಿಂತನೆಯನ್ನು ಸರಿಯಾದ ರೀತಿಯಲ್ಲಿ ಮುಟ್ಟಿಸುವ ಕೆಲಸವು ಅಗತ್ಯವಾಗಿ ನಡೆಯಬೇಕು. ಜಾತಿ ಮತಗಳನ್ನು ಮೀರಿದ ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಬಂಟ್ವಾಳ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಅಭಿಪ್ರಾಯ ಪಟ್ಟರು.

ಅವರು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಸಹಯೋಗದೊಂದಿಗೆ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ  ಯುವ ವಾಹಿನಿ ರಿ. ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ನಾರಾಯಣಗುರು ಸಭಾಭವನ ಗಾಣದಪಡ್ಪುವಿನಲ್ಲಿ ನಡೆದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ  “ನಾರಾಯಣ ಗುರು ಚಿಂತನೆಯ ಕುರಿತ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಮಾತನಾಡಿ ನಾರಾಯಣಗುರುಗಳು ಒಂದೇ ಜಾತಿಗೆ ಸೀಮಿತರಾದವರಲ್ಲ. ನಾರಾಯಣ ಗುರುಗಳ ಚಿಂತನೆ ಇಂದಿಗೂ ಪ್ರಸ್ತುತವಾದದ್ದು. ಯುವ ಜನತೆಗೆ ನಾರಾಯಣಗುರುಗಳ ಚಿಂತನೆಯನ್ನು ಮುಟ್ಟಿಸುವ ಕೆಲಸ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ವಹಿಸಿ ಕಾರ್ಯಕ್ರಮದ ಅಗತ್ಯತೆ ಪ್ರಸ್ತುತತೆ ಕುರಿತು ಮಾತನಾಡಿದರು ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಮೋಹನ್ ಮಾಡೂರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸಂಘದ ಕಾರ್ಯದರ್ಶಿ ರಮೇಶ್ ಎಂ ತುಂಬೆ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕಂಜತ್ತೂರು  ಉಪಸ್ಥಿತರಿದ್ದರು. ದ್ವಿತೀಯ ಉಪಾಧ್ಯಕ್ಷ ನಾಗೇಶ್ ನೈಬೇಲು  ಸ್ವಾಗತಿಸಿದರು. ಕಾರ್ಯದರ್ಶಿ ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು


Share with

Leave a Reply

Your email address will not be published. Required fields are marked *