ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.. ಮಿಂಚು ಕ್ಯಾಟ್ ಹೌಸ್..!!

Share with

ಊರೂರು ಸುತ್ತಾಡುತ್ತಿದ್ದ ಬೀಡಾಡಿ ಬೆಕ್ಕೊಂದು ಅಚಾನಕ್ ಆಗಿ ಮಂಗಳೂರಿನ ಪಾಂಡೇಶ್ವರದ ಫೋರಂ ಮಾಲ್ ಗೆ ಸಂದರ್ಶಕರ ಜತೆ ಎಂಟ್ರಿ ಕೊಟ್ಟು, ಸದ್ಯ ಅಲ್ಲೇ ವಾಸಿಸುತ್ತಿದ್ದು, ಸಂದರ್ಶಕರ ಪಾಲಿಗೆ ಸೆಲೆಬ್ರಿಟಿಯಾಗಿ ಮಾರ್ಪಟ್ಟಿದೆ. ಸದ್ಯ ಈ ಬೆಕ್ಕಿಗೆ ಮಿಂಚು ಎಂದು ಹೆಸರಿಡಲಾಗಿದ್ದು, ಪ್ರಸ್ತುತ ಇದರ ವಾಸಕ್ಕೊಂದು ಮಾಲ್ ಎದುರಲ್ಲೇ ಕ್ಯಾಟ್ ಹೌಸ್ ನಿರ್ಮಿಸಲಾಗಿದೆ.

ಫೋರಂ ಮಾಲ್ ನ ಆಸುಪಾಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅಡ್ಡಾಡುತ್ತಿರುವ ಈ ಬೆಕ್ಕು ಮುದ್ದು ಮುದ್ದಾಗಿದೆ. ಒಂದೇ ನೋಟಕ್ಕೆ ಸೆಳೆಯುವ ಅದರ ಕಣ್ಣುಗಳು, ತಳುಕು-ಬಳುಕಿನ ನಡಿಗೆಯಿಂದ ಮಾಲ್ ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ. ಮಾಲ್ ಗೆ ಭೇಟಿ ನೀಡುವ ಕೆಲವರು ಒಂದು ಕ್ಷಣ ಬೆಕ್ಕಿನತ್ತ ಆಗಮಿಸಿ ಫೋಟೋ, ಸೆಲ್ಪಿ ತೆಗೆದು ಸಂಭ್ರಮಿಸುತ್ತಾರೆ. ಇದರ ಚಲನವಲನ ಕಂಡ ಮಾಲ್ ಸಿಬ್ಬಂದಿ ‘ಮಿಂಚು’ ಎಂದು ಹೆಸರಿಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ಬೆಕ್ಕಿಗಾಗಿ ಸಿಬ್ಬಂದಿ ಕ್ಯಾಟ್ ಹೌಸ್ ನಿರ್ಮಿಸಿದ್ದಾರೆ.


Share with

Leave a Reply

Your email address will not be published. Required fields are marked *