ಕಾಸರಗೋಡು : ರಾಮಾಯಣ ಮಾಸಾಚರಣೆಯ ಭಾಗವಾಗಿ ರಾಮಾಯಣ ಪ್ರವಚನವು ಶ್ರೀ ಅಯ್ಯಪ್ಪ ಭಜನಾ ಮಂದಿರತತ್ವಸಿಮಸಿ ಸಭಾಮಂಟಪದಲ್ಲಿ ಜುಲೈ 17 ರಿಂದ ನಡೆಯುತ್ತಾ ಬರುತ್ತಿದೆ. ಆ ಪ್ರಯುಕ್ತ ಆಗಸ್ಟ್ 1 ರಿಂದ ಆಗಸ್ಟ್ 8ರ ವರೆಗೆ ರಾಮಾಯಣ ಪ್ರವಚನ ಹಾಗೂ ಕಥಾ ಭಾಗದ ವಿವರಣೆಯನ್ನು ಶ್ರೀ ಪುಂಡರಿಕಾಕ್ಷ ಇವರು ನಡೆಸಿಕೊಡಲಿದ್ದಾರೆ.


ಅಗಸ್ಟ್ 1 ರಂದು ಸಾಯಂಕಾಲ 5:30ಕ್ಕೆ ಶ್ರೀ ಪುಂಡರಿಕಾಕ್ಷ ಇವರಿಗೆ ಸತ್ಯ ಸಾಯಿ ಅಭಯನಿಕೇತನದ ಸಮೀಪವಿರುವ ಗುಳಿಗನ ಕಟ್ಟೆ ಪರಿಸರದಿಂದ ಸ್ವಾಗತ ಕಾರ್ಯ ನಡೆಯಲಿದೆ. ರಾಮಾಯಣ ಪ್ರವಚನ ಸಾಯಂಕಾಲ 6 ಘಂಟೆಯಿಂದ 8 ಗಂಟೆ ತನಕ ತತ್ವಮಸಿ ಸಭಾ ಮಂಟಪದಲ್ಲಿ ನಡೆಯಲಿದೆ. ಶ್ರೀಮಂದಿರ ಪರಿಸರದ ಎಲ್ಲಾ ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




