ಆಟೋ ರಿಕ್ಷಾ ಚಾಲಕರ ಸಂಘಟನೆ ವತಿಯಿಂದ ಬೃಹತ್ ರಕ್ತದಾನ ಶಿಬಿರ

Share with

ಮಂಜೇಶ್ವರ : ಆಟೋ ರಿಕ್ಷಾ ಚಾಲಕರ ಸಂಘಟನೆಯಾದ ಎಸ್ ಟಿ ಯು ಉದ್ಯಾವರ ಯೂನಿಟ್ ಹಾಗೂ ಯನಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉದ್ಯಾವರ ಯೂನಿಟ್ ಆಟೋ ರಿಕ್ಷಾ ನಿಲ್ದಾಣದ ಪರಿಸರದಲ್ಲೇ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ಆಟೋ ರಿಕ್ಷಾ ಚಾಲಕರು ಆಟೋ ಡ್ರೈವರ್ಸ್ ಹೆಲ್ಪಿಂಗ್ ಚ್ಯಾರಿಟಿ ಎಂಬ ಸಂಘಟನೆಯನ್ನು ರೂಪೀಕರಿಸಿ ಬಡ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ತಮ್ಮಿಂದಾಗುವ ರೀತಿಯ ಸಹಾಯಗಳನ್ನು ಒದಗಿಸಿ ಹಲವು ರೀತಿಯ ಸಮಾಜಮುಖಿ ಸೇವೆಗಳನ್ನು ನೀಡಿ ಈಗಾಗಲೇ ಸದ್ದಿಲ್ಲದೆ ಸುದ್ದಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಕೂಡಾ ಗಮನಾರ್ಹ ವಿಷಯ
ಜುಲೈ 16ರಂದು ಬೆಳಿಗ್ಗೆ ಸಂಘಟನೆಯ ಅಧ್ಯಕ್ಷ ಆಫ್ತಾಬ್ ತಂಘಲ್ ರವರ ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಮಂಜೇಶ್ವರದ ಜನಪ್ರಿಯ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು.
ಈ ಸಂದರ್ಭ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಕೋಶಾಧಿಕಾರಿ ಅಸಯ್ಯದ್ ಸೈಫುಲ್ಲ ತಂಘಲ್, ವಾರ್ಡ್ ಸದಸ್ಯ ಮುಸ್ತಫ ಉದ್ಯಾವರ, ಹನೀಫ್ ಕುಂಜತ್ತೂರು, ಇರ್ಫಾನ್, ಮೊಯಿದೀನ್ ಹೊಸಂಗಡಿ  ವೈಧ್ಯೆಯರಾದ ಗಾಯತ್ರಿ ಹಾಗೂ ಪ್ರಿಯಾಂಕ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು.
ಶಿಬಿರದಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ತಮ್ಮ ರಕ್ತದಾನ ಮಾಡಿ ಮಾನವೀಯತೆಗೆ ತಮ್ಮ ಕೊಡುಗೆ ನೀಡಿದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಆಟೋ ರಿಕ್ಷಾ ಚಾಲಕರಿಗೆ ಶಾಸಕರು ಸಮವಸ್ತ್ರವನ್ನು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಯನಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಗಳು ಶಿಬಿರವನ್ನು ಯಶಸ್ವೀಯಾಗಿ ನಡೆಸಿದರು.
ನಾಸಿರ್ ಶಾಫಿ, ಅಬ್ಬಾಸ್, ಸಲೀಂ ಮೊದಲಾದವರು ನೇತೃತ್ವ ನೀಡಿದರು.
ಈ ರಕ್ತದಾನ ಶಿಬಿರವು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಯಾಗಿ ಸಮುದಾಯದ ಸದೃಡ ಆರೋಗ್ಯದತ್ತ ದೊಡ್ಡ ಹೆಜ್ಜೆಗೊಂದು ಸಾಕ್ಷಿಯಾಯಿತು.


Share with

Leave a Reply

Your email address will not be published. Required fields are marked *