
ಉಪ್ಪಳ: ಬಂದ್ಯೋಡಿನಲ್ಲಿ ಅಟೋರಿಕ್ಷಾ ಚಾಲಕ ಪಂಜತೊಟ್ಟಿ ಎಸ್.ಸಿ ಕಾಲನಿ ನಿವಾಸಿ ಸುಧಾಕರ.ಪಿ [36] ನಿಧನ ಹೊಂದಿದರು. ಸೋಮವಾರ ರಾತ್ರಿ ಮಲಗಿದ್ದು, ಬೆಳಿಗ್ಗೆ ಎದ್ದೇಳದ ಕಾರಣ ಮನೆಯವರು ಎಬ್ಬಿಸಲು ಪ್ರಯತ್ನಿಸಿದರೂ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಡೊಯ್ಯಲಾಗಿದೆ. ಈ ವೇಳೆ ನಿಧನ ಸಂಭವಿಸಿದೆ. ಹೃದಯಘಾತವೇ ನಿಧನಕ್ಕೆ ಕಾರಣವೆನ್ನಲಾಗಿದೆ. ಇವರು ಫೆವರೇಟ್ ಕ್ಲಬ್ ಪಂಜ ಇದರ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಮೃತರು ತಾಯಿ ದೇವಕಿ, ಸಹೋದರ ಸತೀಶ, ಸಹೋದರಿಯರಾದ ಕವಿತ, ಸರಿತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತಂದೆ ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ.