ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ.) ವಿಟ್ಲ ಇದರ ಸಾಲೆತ್ತೂರು ವಲಯದ ಮಂಚಿ ಕಾರ್ಯಕ್ಷೇತ್ರದ ಸಿರಿತನ ಜ್ಞಾನ ವಿಕಾಸ ಕೇಂದ್ರದಲ್ಲಿ ಸದಸ್ಯರಿಗೆ ನೀರಿನ ಬಳಕೆ, ಜ್ಞಾನ ವಿಕಾಸ ಯೂ ಟ್ಯೂಬ್ ಕಾರ್ಯಕ್ರಮದ ಬಗ್ಗೆ ಸಂಚಾರಿ ನಿಯಮದ ಬಗ್ಗೆ ಮನುಷ್ಯನರಿಗೆ ಬರುವ ಕಾಯಿಲೆಗಳ ಬಗ್ಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಬರುವ ಸಮಸ್ಯೆಗಳ ಬಗ್ಗೆ ಮೂಡಿಸಿದರು. ಕಾರ್ಯಕ್ರಮವನ್ನು ಮಂಚಿ ಒಕ್ಕೂಟದ ಅಧ್ಯಕ್ಷರಾದ ದಿವಾಕರ್ ನಾಯಕ್ ಉದ್ಘಾಟಿಸಿದರು ಪತ್ರಕರ್ತ ಮೌನೇಶ್ ವಿಶ್ವಕರ್ಮ, ದಕ್ಷಿಣಕನ್ನಡ ಹಿರಿಯಪ್ರಾಥಮಿಕ ಶಾಲೆ ಮೊಂತಿಮಾರು ಶಾಲಾ ಮುಖ್ಯ ಶಿಕ್ಷಕಿ ದೇವಕಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಪ್ರಭು, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಶೋಕ್,ಉಪಸ್ಥಿತರಿದ್ದರು , ಒಕ್ಕೂಟ ಪದಾಧಿಕಾರಿ, ಜ್ಞಾನ ವಿಕಾಸ ಕೇಂದ್ರ ಸದಸ್ಯರು ಸ್ವ ಸಹಾಯ ಸಂಘ ದ ಸದಸ್ಯರು ಪಾಲ್ಗೊಂಡಿದ್ದರು ಸೇವಾಪ್ರತಿನಿಧಿ ಚಂಚಲಾಕ್ಷಿ ಸ್ವಾಗತಿಸಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಕಾರ್ಯ ಕ್ರಮನಿರೂಪಿಸಿದರು