ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಸಂಖ್ಯೆ 10,431 ಇದೆ: ಜಿಲ್ಲಾ ಆರೋಗ್ಯಾಧಿಕಾರಿ

Share with

ಮಂಗಳೂರು: ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಸಂಖ್ಯೆ 10,431 ಇದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ ಎಂದು ನ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|ತಿಮ್ಮಯ್ಯ ಅವರು ಮಾಹಿತಿಯನ್ನು ನೀಡಿದರು.

ಜಾಗ್ರತಿ ಕಾರ್ಯಕ್ರಮದ ಬಗ್ಗೆ ನ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯಾಧಿಕಾರಿ ಡಾ|ತಿಮ್ಮಯ್ಯ ಅವರು ಈ ಮಾಹಿತಿಯನ್ನು ಒದಗಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನದ ಅಂಗವಾಗಿ ಡಿಸೆಂಬರ್ 1ರಂದು ಕಣಚೂರು ವೈದ್ಯಕೀಯ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಜಾಗ್ರತಿ ಕಾರ್ಯಕ್ರಮದ ಬಗ್ಗೆ ನ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಒದಗಿಸಿದರು.

2007-08ರ ಸಾಲಿನಲ್ಲಿ 1,169 ಎಚ್‌ಐವಿ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಮುಂದಿನ ವರ್ಷ 1064 ಪ್ರಕರಣಗಳು ಇದ್ದವು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಮೂರಂಕಿಗೆ ಇಳಿಯಿತು. 2016-17ನೇ ಸಾಲಿನಲ್ಲಿ ಮೊದಲ ಬಾರಿ 600ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾದವು. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ. ಕಳೆದ 17 ವರ್ಷಗಳಲ್ಲಿ ಜಿಲ್ಲೆಯಲ್ಲಿ 7,49,494 ಮಂದಿ ಪರೀಕ್ಷೆಗೆ ಒಳಗಾದವರು. ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ತಡೆಗೆ ಸಂಬಂಧಿಸಿ 19 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಇವೆ. 3 ಎಆರ್‌ಟಿ ಕೇಂದ್ರಗಳಿದ್ದು, 13 ಲಿಂಗ್ ಎಆರ್‌ಟಿ ಕೇಂದ್ರಗಳು ಇವೆ. 54 ರೆಡ್ ರಿಬ್ಬನ್ ಕ್ಲಬ್‌ಗಳು, 14 ರಕ್ತ ನಿಧಿ ಕೇಂದ್ರಗಳು ಮತ್ತು 3 ರಕ್ತ ಶೇಖರಣಾ ಘಟಕಗಳು ಇವೆ ಎಂದು ತಿಳಿಸಿದರು.

ಏಡ್ಸ್ ತಡೆ ದಿನಾಚರಣೆ ಅಂಗವಾಗಿ ಡಿ.1ರಂದು ಬೆಳಿಗ್ಗೆ 7 ಗಂಟೆಗೆ ಬಾವುಟಗುಡ್ಡದಿಂದ ಎಸ್‌.ಡಿ.ಎಂ ಕಾನೂನು ಕಾಲೇಜಿನವರೆಗೆ ಜಾಥಾ ನಡೆಯಲಿದೆ ಎಂದು ತಿಳಿಸಿದರು. ಮೇಯರ್ ಸುಧೀರ್ ಶೆಟ್ಟಿ ಅವರು ಉದ್ಘಾಟಿಸುವರು. ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಉದ್ಘಾಟಿಸುವರು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ|ಬದ್ರುದ್ದೀನ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಮಹೇಶ್ ಅವರು ಇದ್ದರು.


Share with

Leave a Reply

Your email address will not be published. Required fields are marked *