ಪುತ್ತೂರು: ಪುತ್ತೂರಿಗೆ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯ ಆಮಂತ್ರಣ ಅಕ್ಷತೆ ಆಗಮಿಸಿದ್ದು, ನೂರಾರು ಜನರು ಅಕ್ಷತೆಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ವಾಗತಿಸಿದರು. ಅಕ್ಷತೆ ಕುಂಭ-ಮೇಳ ಸ್ವಾಗತದೊಂದಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿದ್ದು, ಅಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಇರಿಸಿ ಅಕ್ಷತೆಗೆ ಪೂಜೆಯನ್ನು ಸಲ್ಲಿಸಲಾಯಿತು.
ನ.30ರ ತನಕ ದೇವಸ್ಥಾನದ ಗರ್ಭಗುಡಿಯಲ್ಲೇ ಇರಲಿರುವ ಅಕ್ಷತೆ, ಬಳಿಕ ನವೆಂಬರ್ 30ರಂದು ರಾಮಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ಸಮಿತಿಯ ತಾಲೂಕು ಘಟಕದ ಸಭೆ ನಡೆಯಲಿದೆ. ಆ ಸಭೆಯಲ್ಲಿ ತಾಲೂಕು ಘಟಕ ಮತ್ತು ಗ್ರಾಮ ಘಟಕಗಳಿಗೆ ಅಕ್ಷತೆಯ ಹಸ್ತಾಂತರ ಮಾಡಲಾಗುವುದು.
ಬಳಿಕ ಜನವರಿ 1ರ ತನಕ ಆಯಾಯ ಗ್ರಾಮದ ದೈವ ಮತ್ತು ದೇವಸ್ಥಾನದಲ್ಲಿ ಅಕ್ಷತೆ ಇರಲಿದೆ, ಜನವರಿ 1ರಿಂದ ಪ್ರತೀ ಹಿಂದೂ ಮನೆಗಳಿಗೆ ಅಕ್ಷತೆ ಹಂಚಲಾಗುವುದು ಎಂದು ತಿಳಿದು ಬಂದಿದೆ.