ಆನೆಗುಡ್ಡೆ ದೇವಸ್ಥಾನದಲ್ಲಿ ನಡೆದ ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಭಾಗಿಯಾದ ಬಿ.ವೈ. ವಿಜಯೇಂದ್ರ ಕುಟುಂಬ

Share with

ಡಾ. ಧನಂಜಯ ಸರ್ಜಿ, ಭೋಜೇಗೌಡ ಮೊದಲ ಪ್ರಶಸ್ತಿದ ಮತದಲ್ಲೇ ಗೆಲ್ಲುತ್ತಾರೆ

ಡಾ. ಸರ್ಜಿ ಅವರನ್ನು ಈಶ್ವರಪ್ಪನವರೇ ಸೂಚಿಸಿದ್ದು, ಈಗ ಮರೆತಿದ್ದಾರೆ

ಕುಂಭಾಶಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ನಡೆದ ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕುಟುಂಬ ಸಮೇತರಾಗಿ ಭಾಗವಹಿಸಿದರು.
ಉದ್ಯಮಿ ಜಿ. ರಾಘವೇಂದ್ರ ಉಪಾಧ್ಯಾಯ ಕುಟುಂಬಸ್ಥರು ನಡೆಸಿದ ಸುಮಾರು ಒಂದುವರೆ ಗಂಟೆಗಳ ನಡೆದ ಯಾಗದಲ್ಲಿ ಬಿ.ವೈ. ವಿಜಯೇಂದ್ರ ಅವರು ಪತ್ನಿ ಪ್ರೇಮ ವಿಜಯೇಂದ್ರ ಜೊತೆ ಭಾಗಿಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ರಾಘವೇಂದ್ರ ಉಪಾಧ್ಯಾಯರು ನಮ್ಮ ತಂದೆಯವರಿಗೆ ಬಹಳ ಆಪ್ತರು. ತಂದೆಯವರು ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಮತ್ತು ಕುಟುಂಬದವರು ಯಾಗದಲ್ಲಿ ಭಾಗಿಯಾಗಿದ್ದೇವೆ ಎಂದರು.
ರಾಜ್ಯದಲ್ಲಿ ಆರು ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಬಂಡಾಯದ ಕಾರಣಕ್ಕೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ. ಯಾವುದೇ ಗೊಂದಲ ಇಲ್ಲದೆ ನಮ್ಮ ಶಾಸಕರು ನಾಯಕರು ಕೆಲಸ ಮಾಡುತ್ತಿದ್ದಾರೆ. ಡಾ. ಧನಂಜಯ ಸರ್ಜಿ, ಭೋಜೇಗೌಡ ಮೊದಲ ಪ್ರಶಸ್ತಿದ ಮತದಲ್ಲೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ ಎಂದು ಹೇಳಿದರು.
ಈಶ್ವರಪ್ಪ ಧನಂಜಯ ಸರ್ಜಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಚರ್ಚೆ ಮಾಡಿದ್ದಾರೆ. ನಾನು ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ. ಅಭ್ಯರ್ಥಿ ಯಾರು ಎಂದು ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಸರ್ಜಿ ಅವರನ್ನು ಸೂಚಿಸಿದ್ದು, ಡಾ. ಧನಂಜಯ ಸರ್ಜಿ ಸಜ್ಜನರಿದ್ದಾರೆ ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯ ಹೇಳಿದ್ದರು. ಈಶ್ವರಪ್ಪ ಹೇಳಿದ್ದನ್ನು ಮರೆತಿದ್ದಾರೆ ಎಂದು ಭಾವಿಸುತ್ತೇನೆ. ಭಾರತೀಯ ಜನತಾ ಪಕ್ಷ ಒಟ್ಟಾಗಿ ಶ್ರಮ ಹಾಕುತ್ತಿದೆ, ಅಭ್ಯರ್ಥಿಗಳನ್ನ ಗೆಲ್ಲಿಸುತ್ತದೆ ಎಂದರು.


Share with

Leave a Reply

Your email address will not be published. Required fields are marked *