ಬಜೆ ದೆಲಂತೊಟ್ಟು  ಕ್ಷೇತ್ರದಲ್ಲಿ ಕರ್ಕಾಟಕ ಮಾಸದ ವಿಶೇಷ ಕಾರ್ಯಕ್ರಮಗಳು ಇಂದಿನಿoದ

Share with


ಬoದ್ಯೋಡು: ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕರ್ಕಾಟಕ ಮಾಸದ ವಿಶೇಷ ಕಾರ್ಯಕ್ರಮ ಇಂದಿನಿoದ ಜುಲೈ ೨೧ರ ತನಕ ನಡೆಯಲಿದೆ. ಇಂದು [೧೮-೭-೨೦೨೪] ಸಂಜೆ ೪ರಿಂದ ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ ಹಾಗೂ ಪ್ರವಚನ ಆರಂಭಗೊಳ್ಳಲಿದೆ. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಿ ನಾರಾಯಣ ಮಯ್ಯ ಬಜೆ ದೀಪ ಬೆಳಗಿಸಿ ಚಾಲನೆ ನೀಡುವರು. ೧೯ಮತ್ತು ೨೦ರಂದು  ಸಂಜೆ ೪ರಿಂದ ಪಾರಾಯಣ ಹಾಗೂ ಪ್ರವಚನ ನಡೆಯಲಿದೆ. ೨೧ರಂದು ಪ್ರಾತಕಾಲ ೭ರಿಂದ ಗಣಪತಿ ಹೋಮ, ಬೆಳಿಗಿನ ಮಹಾಪೂಜೆ, ೧೦ರಿಂದ ಭಜನೆ, ಮಧ್ಯಾಹ್ನ ೧೨ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೩ರಿಂದ ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗದವರಿಂದ ಶ್ರೀರಾಮ ವನಗಮನ, ಪಾದುಕಾ ಪ್ರದಾನ ತಾಳಮದ್ದಳೆ ಕೂಟ, ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ತಾಡ ಗೋಪಾಲಕೃಷ್ಣ ಮಯ್ಯ ರವರಿಗೆ ಗೌರ್ವಾರ್ಪಣೆ ನಡೆಯಲಿದೆ. ರಾತ್ರಿ ೮.೧೫ಕ್ಕೆ ದುರ್ಗಾನಮಸ್ಕಾರ ಪೂಜೆ, ರಾತ್ರಿ ೮.೩೦ಕ್ಕೆ ವಿಶೇಷ ಹುಣ್ಣಿಮೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *