
ಮoಗಲ್ಪಾಡಿ: ಕುಬಣೂರು ಶ್ರೀ ಶಾಸ್ತಾವು ದೇಸ್ಥಾನದಲ್ಲಿ ಬಲಿವಾಡು ಕೂಟ, ಶತರುದ್ರಾಭಿಷೇಕ ಹಾಗೂ ರಂಗಪೂಜೆ ಫೆ.10ರಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರಂಗವಾಗಿ ಫೆ.9ರಂದು ಬೆಳಿಗ್ಗೆ 9ಕ್ಕೆ ಗಣಹೋಮ, ಸಂಜೆ 4ರಿಂದ ರಾತ್ರಿ 8.30ರ ತನಕ ವಿವಿಧ ತಂಡಗಳಿoದ ಭಜನೆ, ರಾತ್ರಿ 8.30ಕ್ಕೆ ದುರ್ಗಾನಮಸ್ಕಾರ ಪೂಜೆ, ಫೆ.10ರಂದು ಬೆಳಿಗ್ಗೆ 8ರಿಂದ ಕಲಶ ಮತ್ತು ಶತರುದ್ರಾಭಿಷೇಕ, ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 3ರಿಂದ 7ರ ತನಕ ವಿವಿಧ ತಂಡಗಳಿoದ ಭಜನೆ, ರಾತ್ರಿ 7ರಿಂದ 8ರ ತನಕ ನವದುರ್ಗ ಕುಣಿತ ಭಜನೆ ಅಗರ್ತಿಮೂಲೆ ಪುಳಿಕುತ್ತಿ ತಂಡದಿoದ ಕುಣಿತ ಭಜನೆ, ರಾತ್ರಿ 8.30ರಿಂದ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಇದೇ ಸಂದರ್ಭದಲ್ಲಿ ಯುವ ಬಳಗ ತಿಂಬರ ಮಂಗಲ್ಪಾಡಿ ಇದರ 15ನೇ ವಾರ್ಷಿಕೋತ್ಸವ ಸಂಭ್ರಮ ನಡೆಯಲಿದ್ದು, ರಾತ್ರಿ 7.30ಕ್ಕೆ ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ, 8.30ರಿಂದ ಚೈತ್ಯನ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.