ಬೆಂಗಳೂರು: ಕೇರಳ ವಿಧಾನಸಭೆ ಮಂಡಿಸಿದ ಕಡ್ಡಾಯ ಮಲೆಯಾಳ ಮಸೂದೆ ವಿರುದ್ಧ ಕರ್ನಾಟಕ ಎಂಎಲ್ಸಿ ಬಲ್ಕೀಸ್ ಬಾನು ವಿಧಾನಪರಿಷತ್ನಲ್ಲಿ ಧ್ವನಿ ಎತ್ತಿದರು. ಕಾಸರಗೋಡು ಗಡಿನಾಡು ಪ್ರದೇಶದ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಕರ್ನಾಟಕ ಸರಕಾರದ ಗಮನ ಸೆಳೆದಿದ್ದಾರೆ.

ಮುಖ್ಯಮ೦ತ್ರಿ ಸಿದ್ಧರಾಮಯ್ಯ ಈ ಮೊದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಡ್ಡಾಯ ಮಲೆಯಾಳ ಮಸೂದೆಯನ್ನು ಹಿಂತೆಗೆಯಲು ಒತ್ತಾಯಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಮುಖಂಡೆಯಾಗಿರುವ ಬಲ್ಕಿಸ್ ಬಾನು ಕರ್ನಾಟಕ ವಿಧಾನಪರಿ ಷತ್ನಲ್ಲಿ ಪ್ರಸ್ತಾಪಿಸಿ ಕೇರಳದ ಕನ್ನಡಿಗರ ಆತಂಕದ ಬಗ್ಗೆ ಪ್ರಸ್ತಾಪಿಸಿದ್ದಾರೆ.




