EVM ಬದಲು ಮತಪತ್ರ.. ಮಸೂದೆ ಅಂಗೀಕಾರ

Share with

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇನ್ನು ಮುಂದೆ EVM ಬದಲಿಗೆ ಹಳೆಯ ಮಾದರಿಯ ಮತಪತ್ರ ಬಳಸಲು ಅವಕಾಶ ನೀಡುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕವು ವಿಧಾನಸಭೆಯಲ್ಲಿ ತೀವ್ರ ಗದ್ದಲದ ನಡುವೆ ಅಂಗೀಕಾರಗೊಂಡಿದೆ.

ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ ಈ ವಿಧೇಯಕವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಯಿತು. ಮಸೂದೆ ವಿರೋಧಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ಸದನದಿಂದ ಹೊರನಡೆದರು.


Share with

Leave a Reply

Your email address will not be published. Required fields are marked *