
ಬಾಳೆ ಹಣ್ಣಿನ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಕೊರತೆ, ಜಾತ್ರೆ, ಮದುವೆ ಸೀಸನ್ ಇತ್ಯಾದಿ ಕಾರಣಗಳಿಂದ ಏಲಕ್ಕಿ ಬಾಳೆಹಣ್ಣಿನ ದರ ಶತಕದ ಗಡಿ ದಾಟಿದೆ.

ಬೆಂಗಳೂರಿನಲ್ಲೂ ಒಂದು ಕೆಜಿಗೆ 120 ರೂಪಾಯಿ ಆಗಿದೆ. ತಿಂಗಳ ಹಿಂದೆ ಪ್ರತಿ ಕೆಜಿಗೆ 50ರಿಂದ 60 ರೂ. ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಬೆಳಗಾವಿಯಲ್ಲೂ ಈಗ ಕೆಜಿಗೆ 85 ರಿಂದ 100 ರೂ. ತಲುಪಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ




