Bangalore Stampade: ಸಿಎಂ, ಡಿಸಿಎಂ, ಗೃಹಸಚಿವರನ್ನು ಕೂಡಲೇ ಬಂಧಿಸಬೇಕು: ರಾಮುಲು

Share with

ಬಳ್ಳಾರಿ: ಆರ್ ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಿಂದ 11 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವ‌ರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಶುಕ್ರವಾರ (ಜೂ.06) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಫೋಟೊಶೂಟ್ ಮಾಡಲು, ರೀಲ್ಸ್ ಮಾಡಿಕೊಳ್ಳುವ ಸಲುವಾಗಿ ಆರ್ ಸಿಬಿ ವಿಜಯೋತ್ಸವ ಮಾಡಿ ಬಡವರ ಪ್ರಾಣ ತೆಗೆದಿದೆ ಎಂದು ಆಕ್ರೋಶ ಹೊರಹಾಕಿದರು.

ಪಂದ್ಯ ಮುಗಿದ ಮರುದಿನವೇ ಕಾರ್ಯಕ್ರಮವನ್ನು ಏಕೆ ಮಾಡಬೇಕಿತ್ತು? ಒಂದೆರಡು ದಿನ ತಡವಾಗಿ ನಡೆಸಬಹುದಿತ್ತು. ಕೂಡಲೇ ನೈತಿಕ ಹೊಣೆ ಹೊತ್ತು ಮೂರು ಜನರು ರಾಜೀನಾಮೆ ನೀಡಬೇಕು. ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಎ1, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಎ2, ಗೃಹ ಸಚಿವ ಪರಮೇಶ್ವ‌ರ್ ಅವರನ್ನು ಎ3 ಆರೋಪಿಗಳನ್ನಾಗಿ ಮಾಡಬೇಕು ಎಂದು ಮಾಜಿ ಸಚಿವ ರಾಮುಲು ಒತ್ತಾಯಿಸಿದರು.


Share with

Leave a Reply

Your email address will not be published. Required fields are marked *