ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

Share with

ಬೆಂಗಳೂರು, ಜ.23: ಈ ತಿಂಗಳ ಕೊನೆಯ ವಾರ ಅಂದರೆ ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜೆ ಇದೆ. ಈ ಮೂರು ದಿನ ರಜೆಯಲ್ಲಿ ಏನ್ ಮಾಡೋದು ಎಂಬ ಯೋಚನೆ ಬರುವುದು ಸಹಜ, ಎಲ್ಲಿಗಾದರೂ ಹೋಗಬೇಕಲ್ಲ. ಅದರೂ ತಿಂಗಳ ಕೊನೆಗೆ ಹೇಳಿಕೊಳ್ಳುವಷ್ಟು ಬಜೆಟ್ ಇಲ್ಲ, ಅದರೂ ಎಲ್ಲಿಗಾದರೂ ಹೋಗಬೇಕು ಎಂಬ ಆಸೆ ಇದ್ರೆ, ಈ ಪ್ಯಾಕೇಜ್ ಬೆಸ್ಟ್ ನೋಡಿ. ಈ ಮೂರು ದಿನದ ರಜೆಯಲ್ಲಿ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ)ನ ಈ ಪ್ಯಾಕೇಜ್ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ನಲ್ಲಿ ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿಗೆ ಭೇಟಿ ನೀಡಬಹುದು.

ಮೈಸೂರು ಒಂದು ವಿಶೇಷ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿ ಆಕರ್ಷಕ ತಾಣ ಇದೆ. ಕಳೆದ ಕೆಲವು ವರ್ಷಗಳಿಂದ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿನ ಪ್ರಮುಖ ಆರ್ಕಷಕ ಸ್ಥಳಗಳಾಗಿವೆ. ಊಟಿಯು ಕೂಡ ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲೂ ಈ ಸಮಯದಲ್ಲಿ ಅಂದರೆ ಚಳಿ ವಾತಾವರಣದಲ್ಲಿ ಭೇಟಿ ನೀಡಿದ್ರೆ, ಒಳ್ಳೆಯ ಅನುಭವನ್ನು ನೀಡುತ್ತದೆ.

ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್ : ಶ್ರೀರಂಗಪಟ್ಟಣವು ಮೈಸೂರಿನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಲ್ಲಿರುವ ಒಂದು ದ್ವೀಪ . ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಅರಮನೆ ಇದೆ. ದರಿಯಾ ದೌಲತ್ ಬಾಗ್ ಎಂಬ ಸುಂದರವಾದ ಉದ್ಯಾನಗಳ ನಡುವೆ ಇದೆ. ಇನ್ನು ಹಲವಾರು ಪ್ರದೇಶಗಳು ಇಲ್ಲಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಒಂದು ಅದ್ಭುತ ಕ್ಷೇತ್ರವಾಗಿದೆ. ಕಾವೇರಿ ನದಿಯ ಉದ್ದಕ್ಕೂ ಸ್ಮಾರ್ತ -ಬಾಬೂರ್ಕಮ್ಮೆ ಮತ್ತು ಶ್ರೀ ವೈಷ್ಣವರ ಐದು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಐದು ಪವಿತ್ರ ಸ್ಥಳಗಳನ್ನು ಒಟ್ಟಾಗಿ ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ.

ಸಂತ ಫಿಲೋಮಿನ ಚರ್ಚ್: ಈ ಚರ್ಚ್ಗೆ ಎರಡು ಶತಮಾನಗಳ ಇತಿಹಾಸವಿದೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ಚರ್ಚ್, ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಇಂಡಿಯಾದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿದೆ.

ಊಟಿ (Ooty): ಇದನ್ನು ಉದಗಮಂಡಲಂ ಎಂದು ಕರೆಯುತ್ತಾರೆ, ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿದೆ, ಇದು ತನ್ನ ಸುಂದರ ಚಹಾ ತೋಟಗಳು, ತಂಪಾದ ಹವಾಮಾನ, ಸರೋವರಗಳು (ಊಟಿ ಸರೋವರ), ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಒಂದು ಪ್ರಸಿದ್ಧ ಗಿರಿಧಾಮವಾಗಿದೆ, ಇದನ್ನು ‘ಭಾರತದ ಸ್ವಿಟ್ಜರ್ಲ್ಯಾಂಡ್’ ಎಂದೂ ಕರೆಯಲಾಗುತ್ತದೆ, ಮತ್ತು ಇದು ಪ್ರವಾಸಿಗರಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನೀಲಗಿರಿ ಪರ್ವತ ರೈಲು (ಟಾಯ್ ಟ್ರೈನ್), ದೊಡ್ಡಬೆಟ್ಟ ಶಿಖರ, ಪೈಕಾರ ಜಲಪಾತ, ಮತ್ತು ಸರ್ಕಾರಿ ಗುಲಾಬಿ ಉದ್ಯಾನವನ ಮುಂತಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ.


Share with

Leave a Reply

Your email address will not be published. Required fields are marked *