ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ 15 ನೇ ವರ್ಷದ ವಾರ್ಷಿಕ ಸ್ಕೌಟ್ಸ್ -ಗೈಡ್ಸ್ ಹಾಗೂ ಕಬ್ಸ್, ಬುಲ್ -ಬುಲ್ಸ್ ಉತ್ಸವ ಬಂಟ್ವಾಳ ತಾಲೂಕಿನ ದ.ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಇದರ ಆತಿಥ್ಯದಲ್ಲಿ ದಿನಾಂಕ 29-11-2023ನೇ ನ.22ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತಾ.ಡಿ ಪೂಜಾರಿ, ಸದಸ್ಯರಾದ ಧನಂಜಯ ಗೌಡ , ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್.ಎಂ ಜಿ , ಬಂಟ್ವಾಳ ಸ್ಕೌಟ್ಸ್ ಗೈಡ್ಸ್ ಒಕ್ಕೂಟದ ಅಧ್ಯಕ್ಷರಾದ ರೊಟೇರಿಯನ್ ಪ್ರಕಾಶ್ ಕಾರಂತ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ಮೊದಲಾದವರು ಭಾಗವಹಿಸಲಿರುವರು.
ಮಧ್ಯಾಹ್ನದ ನಂತರ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾ ದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಚ್ಚಿದಾನಂದ, ಸದಸ್ಯರಾದ ಶಕೀಲಾ ಕೃಷ್ಣ ಮಿತ್ತ ಕೋಡಿ, ಕ್ಷೇತ್ರ ಸಮನ್ವಯ ಅಧಿಕಾರಿ ರಾಘವೇಂದ್ರ ಬಲ್ಲಾಳ್.ಕೆ.ಎಸ್, ಭಾರತ್ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಕಜೆ, ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ.ವಿ ಮೊದಲಾದವರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಸೂತಿ ಪರಿಣತೆ ಪೂವಕ್ಕ ಪೂಂಜ ಕರಿಂಕ ಹೊಸವಕ್ಲು, ಡಾ.ಅಶ್ವಿನ್ ಆಳ್ವ ಗ್ಯಾಸ್ಟ್ರೋ ಸರ್ಜನ್ ಕರಿಂಕ ಹೊಸ ಮನೆ, ಭಾರತೀಯ ಸೇನೆಯ ನಿವೃತ್ತ ಯೋಧರಾದ ಮೋಹನ್ ಗೌಡ ಕೊಂಕಣ ಕೋಡಿ ಮೊದಲಾದವರನ್ನು ಗೌರವಿಸಲಾಗುವುದು ಎಂದು ಸ್ಕೌಟ್ಸ್-ಗೈಡ್ಸ್ ನಿರ್ದೇಶಕರಾದ ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿಯರು ತಿಳಿಸಿರುತ್ತಾರೆ.