ಬಂಟ್ವಾಳ: ಸಮಾಜಕ್ಕೆ ಪೂರಕ ಆಗಬೇಕಾದ ಸಂಘಟನೆಗಳು ಇಂದು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಸೂರ್ಯನಾರಾಯಣ ಭಟ್ ಕಶೇಕೋಡಿಯವರು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.)ಮಾರುತಿನಗರ ನರಿಕೊಂಬು ಪಾಣೆಮಂಗಳೂರು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಾಮ ಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಧಾರ್ಮಿಕ ಕೇಂದ್ರಗಳು ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳನ್ನು ಮೂಡಿಸಿ ರಾಮ ರಾಜ್ಯದ ಕನಸನ್ನು ಹೊತ್ತ ಭಾರತದ ಸತ್ ಪ್ರಜೆಗಳಾಗುವಂತೆ ಕರೆ ನೀಡಿ, ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿರುವ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ದೀಪ ಪ್ರಜ್ವಲಿಸಿ ಸಂಭ್ರಮಿಸಿ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ವೀರಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಮಹಿಳಾ ಮಂಡಳಿ ಅಧ್ಯಕ್ಷ ಅನಿತಾ ಜೆ ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಯಾದವ ಕೆ ಸ್ವಾಗತಿಸಿ, ಮಹೇಶ್ ಕಡೇಶಿವಾಲಯ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.