ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ.14 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಸಮಿತಾ ಪೂಜಾರಿ, ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೆಟ್ಲಮುಡ್ನೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಅಶೋಕ್ ರೈ, ನೇರಳಕಟ್ಟೆ ಸಿ ಎ ಬ್ಯಾಂಕಿನ ಉಪದ್ಯಕ್ಷ ರಾದ ಡಿ.ತನಿಯಪ್ಪ ಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳದ ಧನಂಜಯ ಗೌಡ, ಸುಜಾತಾ ಸಿ ಜಗದೀಶ್ ಪೂಜಾರಿ ಲತೀಫ್ ನೇರಳಕಟ್ಟೆ, ಮಣಿ ಬಾಲವಿಕಾಸ ಕರೆಸ್ಪಾಂಡೆನ್ಸ್ ಪ್ರಹ್ಲಾದ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುರಳೀಧರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿಯಾದ ತ್ರಿವೇಣಿ ಟೀಚರ್, ಈಶ್ವರ ಭಟ್, ನಾರಾಯಣ ಗೌಡ, ಸೋಮಶೇಖರ್ ಗೌಡ, ರಾಮಚಂದ್ರ ಶೆಟ್ಟಿ, ಚೇತನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.