ವಾಹನ ವ್ಯವಸ್ಥೆ ಕಲ್ಪಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ

Share with


ಅಡ್ಡೂರು: ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರೇ ಹೆಚ್ಚಾಗಿದ್ದಾರೆ.
ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಜನರ ಸದುಪಯೋಗಕ್ಕಾಗಿ ವೈಯಕ್ತಿಕ ನೆಲೆಯಲ್ಲಿ ಮಿನಿ ಬಸ್ ಖರೀದಿಸಿ ಉಚಿತ ವಾಹನದ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ.
ಇಂದು ಬೆಳಿಗ್ಗೆ ಪೊಳಲಿ ದೇಗುಲದ ಮುಂಭಾಗದಲ್ಲಿ, ಅರ್ಚಕರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಿನಿ ಬಸ್ಗೆ ರಾಜೇಶ್ ನಾಯ್ಕ್ ಉಳಿಪಾಡಿಯವರು ಚಾಲನೆ ನೀಡಿದ್ದಾರೆ.ಪೊಳಲಿ ಶ್ರೀ ದೇವಿಯ ಭಕ್ತಾದಿಗಳಿಗೆ ಹಾಗೂ ಊರ ಜನರ ಸದುಪಯೋಗಕ್ಕಾಗಿ ಪೊಳಲಿಯಿಂದ ಅಡ್ಡೂರು ತನಕ ಸೇತುವೆ ದುರಸ್ತಿಯವರೆಗೆ ಉಚಿತ ವಾಹನದ ವ್ಯವಸ್ಥೆಯೂ ಜನರಿಗೆ ಪ್ರಯೋಜನವಾಗಲಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಡ್ಡೂರು ಪೊಳಲಿ ಪಲ್ಗುನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಕಾರಣ ಘನ ವಾಹನಗಳ ಸಂಚಾರ ವನ್ನು ನಿಷೇಧಿಸುವ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದರು. ಕೊನೆಗೆ ಜಿಲ್ಲಾಧಿಕಾರಿ, ತಜ್ಞರು ಹಾಗೂ ಶಾಸಕರು ಈ ಗೊಂದಲವನ್ನು ನಿವಾರಿಸುವಂತಹ ಕೆಲಸ ಮಾಡಿದ್ದರು.ಇನ್ನು ಈ ಬಗ್ಗೆ ಮಾತನಾಡಿದ ಚಂದ್ರಶೇಖರ್ ಶೆಟ್ಟಿ ಬಡ್ಕಬೈಲ್ ಜನರ ಕಷ್ಟವನ್ನು ಅರಿತು ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಒಂದು ಮಿನಿ ಬಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಅಡ್ಡೂರಿನಿಂದ ಪೊಳಲಿಗೆ ಮಾತ್ರ ಇರುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ಪೊಳಲಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ನಾವು ರಾಜೇಶ್ ನಾಯ್ಕ್ ಅವರಿಗೆ ಹೇಳಿದ್ದೇವು, ತಕ್ಷಣ 24 ಗಂಟೆಯೊಳಗೆ ಈ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ, ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ಭುವನೇಶ್, ಚಂದ್ರಹಾಸ ಪಳ್ಳಿಪಾಡಿ, ಲೋಕೇಶ್ ಭರಣಿ, ಯಶಂವತ್ ಕೊಟ್ಯಾನ್ ಪೊಳಲಿ, ಸುಬ್ಬಯ್ಯ ನಾಯ್ಕ್, ಕುಮಾರ್ ಪೊಳಲಿ, ಯಶೋಧರ ಪೊಳಲಿ, ಸಚಿನ್ ಅಡಪ, ಹರೀಶ್ ಬಳ್ಳಿ ಗುರುಪುರ, ಅಶೋಕ್ ಬಡಕಬೈಲ್, ಸುರೇಶ್, ಸಂದೀಪ್ ಪೊಳಲಿ, ಕಾರ್ತಿಕ್ ಬಳ್ಲಾಲ್, ಸಂತೋಷ್ ಮಣಿಕಂಠ, ಜಯಶ್ರೀ ಕರ್ಕೇರಾ ಮೇರಮಜಲ್, ಚಂದ್ರವತಿ ಪೊಳಲಿ ಭಾಗವಹಿಸಿದರು.


Share with

Leave a Reply

Your email address will not be published. Required fields are marked *