ಬಂಟ್ವಾಳ : ಸುರಭಿ ವೈಷ್ಣವಿ ಗೋ ಮಂದಿರದಲ್ಲಿ  ಪುಟಾಣಿ ಶಿವಾoಶ್ ಹುಟ್ಟು ಹಬ್ಬದ ಸಂಭ್ರಮ

Share with



ಬಂಟ್ವಾಳ : ಈಗಿನ ಕಾಲಘಟ್ಟದಲ್ಲಿ ಹುಟ್ಟುಹಬ್ಬದ ದಿನವನ್ನು ಪಾಶ್ಚಾತ್ಯ ರೀತಿಯಲ್ಲಿ ಆಚರಿಸುತ್ತಿರುವವರ ಮಧ್ಯೆ  ವಿಶೇಷವಾಗಿ ಗೋಶಾಲೆ (ಗೋಮಂದಿರ)ದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿ ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹೌದು ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳ ಪುತ್ರ ಶಿವಾಂಶ್ ಇವರ ಎರಡನೇ ವರ್ಷದ ಜನ್ಮದಿನಚರಣೆಯನ್ನು 22-08-2024 ರಂದು ಬೆಂಜನಪದವು ರಾಮನಗರದಲ್ಲಿರುವ ಸುರಭಿ ವೈಷ್ಣವಿ ಗೋ ಮಂದಿರದಲ್ಲಿ  ವಿಜೃಂಭಣೆಯಿಂದ ನಡೆಯಿತು.

ಸತ್ಸಂಗ, ದೇಶಿಗೋವುದಾನ, ಗೋವುಗಳಿಗೆ ಆರತಿ ಬೆಳಗಿ  ಅವಲಕ್ಕಿ, ಬೆಲ್ಲ, ಫಲವಸ್ತು ಸಮರ್ಪಿಸಿ ಗೋಪೂಜೆ ಮಾಡಿ ಅನ್ನದಾನ ನೀಡಿ ಆರಾಧಿಸುವ ಮೂಲಕ  ಅಭಿನ್ ರೈ ಹಾಗೂ ಸುಪ್ರೀಯ ರೈ ದಂಪತಿಗಳು ಹಿಂದೂ ಸಮಾಜಕ್ಕೆ ಮಾದರಿಯಾದರು.

ವರದಿ : ಅನುಷಾ ಆಚಾರ್ ಪಳ್ಳಿ


Share with

Leave a Reply

Your email address will not be published. Required fields are marked *