ಬಂಟ್ವಾಳ: ಆಕ್ರಮವಾಗಿ ಮರಳು ಸಾಗಾಟ; ಎಂಟು ಮಂದಿ ವಶಕ್ಕೆ

Share with

ಬಂಟ್ವಾಳ: ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಬಂಟ್ವಾಳ ನಗರ ಪೊಲೀಸರು ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿದ್ದಾರೆ.

ಸಜೀಪಮುನ್ನೂರಿನ ಸರ್ಫರಾಜ್ ಅಹಮ್ಮದ್, ಕುಲಾಲು ನಿವಾಸಿ ಅಬ್ದುಲ್ ಅಜೀಜ್, ಕುರಿಯಾಳದ ಕಿರಣ್, ಅಮ್ಟಾಡಿ ನಿವಾಸಿ ಅವಿಲ್ ಕ್ರಾಸ್ತಾ, ಮಂಚಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ / ರಶೀದ್, ಬಿ. ಮೂಡದ ಮೊಹಮ್ಮದ್ ಆರೀಫ್, ವಳಚ್ಚಿಲ್ ನ ಸತ್ತಾರ್, ಅಜರುದ್ಧೀನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಗಳನ್ನು ಬಂಟ್ವಾಳ ಪೋಲೀಸರು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.

ಇವರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 41/2024 ಕಲಂ: 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಖಚಿತ ಮಾಹಿತಿಯ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ರಾಮಕೃಷ್ಣ ಹಾಗೂ ಸಿಬ್ಬಂದಿ ಉಮೇಶ ಮತ್ತು ಗೋಪಾಲ ಅವರು ದಾಳಿ ನಡೆಸಿದ್ದಾರೆ.


Share with

Leave a Reply

Your email address will not be published. Required fields are marked *