ಬಂಟ್ವಾಳ: ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಸಮಾರಂಭ

Share with

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ) ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು-ಸ್ವ-ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಇದರ ಸಹಯೋಗದೊಂದಿಗೆ ಪರಂಗಿಪೇಟೆ ಶ್ರೀರಾಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮೂರು ತಿಂಗಳ ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯನ್ನು ನಡೆಸುತ್ತಾ ಬಂದಿದ್ದು ಅದರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಸಮಾರಂಭ

ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಹಾಗೂ ತುಂಬೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೃಷ್ಣಕುಮಾರ್ ಪೂಂಜ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಶೇಷ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಮಕ್ಕಳಿಗೆ ಟ್ಯೂಷನ್ ನೀಡುವುದು ಒಂದಾಗಿದ್ದು ಇದರಿಂದ ಸಿಗುವ ಪ್ರಯೋಜನ ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳುತ್ತಾ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯಕುಮಾರ್, ಪರಂಗಿಪೇಟೆ ಮತ್ತು ಸುಜೀರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳಾದ ಅಮಿತಾ ಮತ್ತು ಮಲ್ಲಿಕಾ, ಪರಂಗಿಪೇಟೆ ಒಕ್ಕೂಟದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥರಾದ ದೇವದಾಸ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಸುಕನ್ಯ ವಂದಿಸಿದರು.


Share with

Leave a Reply

Your email address will not be published. Required fields are marked *