ಬಂಟ್ವಾಳ: ಕಟ್ಟಡ ನಿರ್ಮಾಣದ ಸಾಮಗ್ರಿ ಕಳವು ಪ್ರಕರಣ; ಕಾರ್ಮಿಕ ಬಂಧನ

Share with

ಬಂಟ್ವಾಳ: 9.23 ಲಕ್ಷ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ನ ಹೋಜೈ ತಾಲೂಕಿನ ನಜಿಮುದ್ದೀನ್ ಅವರ ಮಗ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿ

ಅಸ್ಸಾಂ ನ ಹೋಜೈ ತಾಲೂಕಿನ ನಜಿಮುದ್ದೀನ್ ಅವರ ಮಗ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿಯಾಗಿದ್ದಾನೆ. ಪುದು ಗ್ರಾಮದ ಅಮ್ಮೆಮ್ಮಾರ್‌ ನಿವಾಸಿ ಸಿವಿಲ್‌ ಎಂಜಿನಿಯರ್‌ ಹಮ್ಮಬ್ಬ ಮರ್ಜೂಕ್‌ ಅವರ ಜತೆ ಕೆಲಸ ಮಾಡುತ್ತಿದ್ದ ಆರೋಪಿ ಶರೂಪ್‌ ಆಲಂ, ಹಮ್ಮಬ್ಬ ಅವರು ಬಿಲ್ಡಿಂಗ್‌ ಕೆಲಸಕ್ಕೆ ಉಪಯೋಗಿಸುತ್ತಿದ್ದ ಕಬ್ಬಿಣದ ಶೀಟು, ಜಾಕ್‌, ಸ್ಕಪೋಲ್ಡಿಂಗ್‌ ಇತ್ಯಾದಿಗಳನ್ನು ಅವರ ಮನೆಯ ಪಕ್ಕದ ಶೆಡ್‌ನ‌ಲ್ಲಿ ಇಡುತ್ತಿದ್ದರು. ನ.24ರಂದು ಅವರು ಬೆಂಗಳೂರಿಗೆ ಹೋಗಿ 27ಕ್ಕೆ ಮರಳಿದ್ದರು. ನ.29ರಂದು ಶೆಡ್‌ಗೆ ಹೋಗಿ ನೋಡಿದಾಗ ಸೊತ್ತುಗಳು ನಾಪತ್ತೆಯಾಗಿದ್ದವು. ವಿಚಾರಿಸಿದಾಗ ಆರೋಪಿ ಶರೂಪ್‌ ಆಲಂ ಟಾಟಾ ಏಸ್‌ ವಾಹನದ ಮೂಲಕ ಸೊತ್ತುಗಳನ್ನು ಸಾಗಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿ ಮೊಹಮ್ಮದ್ ಶರೂಫ್ ಆಲಂ ಎಂಬಾತನನ್ನು ಡಿ.14ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


Share with

Leave a Reply

Your email address will not be published. Required fields are marked *