ಬಂಟ್ವಾಳ: ಮರಳು ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನರಿಂಗಾನ ನಿವಾಸಿ ಸಿದ್ಧೀಕ್ ಕೆ.ಎಂ. ಬಂಧಿತ ಆರೋಪಿಯಾಗಿದ್ದು, ಈತನನ್ನು ಜ.8ರಂದು ರಾತ್ರಿ ವಿಟ್ಲ ಠಾಣಾ ಪೊಲೀಸರು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ.
ಆರೋಪಿಯ ಬಗ್ಗೆ ಯಾವುದೇ ದಾಖಲೆ/ಭಾವಚಿತ್ರ ಇಲ್ಲದೇ ಇದ್ದುದರಿಂದ ಆತನ ಬಂಧನಕ್ಕೆ ಸಮಸ್ಯೆಯಾಗಿದ್ದು, ಲಾರಿಯ ದಾಖಲಾತಿಗಾಗಿ ಆರ್.ಟಿ.ಒ ಕಚೇರಿಗಳಿಂದ ಮತ್ತು ಎಲ್.ಐ.ಸಿ ಕಚೇರಿಯಿಂದ ಆರೋಪಿಗೆ ಸಂಬಂಧ ಪಟ್ಟ ದಾಖಲಾತಿ ಮತ್ತು ಭಾವಚಿತ್ರವನ್ನು ಸಂಗ್ರಹಿಸಿ ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ಧೀಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ:126/2017 ಕಲಂ:379 r/w 34 ಐಪಿಸಿ ಪ್ರಕರಣ ದಾಖಲಾಗಿತ್ತು. ಸಿದ್ಧೀಕ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯು ತಪ್ಪು ಒಪ್ಪಿಕೊಂಡಿದ್ದು, ನ್ಯಾಯಾಲಯವು ರೂ. 11.000/- ದಂಡವನ್ನು ವಿಧಿಸಿರುತ್ತದೆ.
ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಎಎಸ್ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಆಶೋಕ್ ಭಾಗವಹಿಸಿದ್ದರು.