BASIC COMPUTER SKILLS ತರಬೇತಿ ಕಾರ್ಯಗಾರ

Share with


ಪುತ್ತೂರು: ವ್ಯಾಪಕವಾದ ಡೇಟಾ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಮೂಲ್ಯವಾದ ಒಂದು ಅಂಶವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಅತ್ಯವಶ್ಯವಾಗಿ ಬೇಕಾಗುವ ಕೌಶಲ್ಯವೆಂದರೆ ಕಂಪ್ಯೂಟರ್ ಕೌಶಲ್ಯ. ಫ್ಯಾಶನ್ ಡಿಸೈನ್ ವಿಭಾಗದಲ್ಲೂ ವಸ್ತ್ರ, ಆಭರಣ ಮೊದಲಾದ ಫ್ಯಾಶನ್ ಉತ್ಪನ್ನಗಳ ವಿನ್ಯಾಸಗಳಲ್ಲಿ ಕಂಪ್ಯೂಟರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಂಬAಧಿತ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಬೇಕಾಗಿ, ಅಕ್ಷಯ ಕಾಲೇಜು ಪುತ್ತೂರು, ಫ್ಯಾಷನ್ ಡಿಸೈನ್ ವಿಭಾಗ, “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಪ್ರಥಮ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರವು ದಿನಾಂಕ ೦೬ ಆಗಸ್ಟ್ ೨೦೨೪, ಮಂಗಳವಾರದAದು ನಡೆಯಿತು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಕು. ಸೌಜನ್ಯ, ಉಪನ್ಯಾಸಕಿ ಗಣಕ ವಿಭಾಗ, ಅಕ್ಷಯ ಕಾಲೇಜ್ ಪುತ್ತೂರು ಇವರು ವಿದ್ಯಾರ್ಥಿಗಳಿಗೆ BASIC COMPUTER SKILLS ಎನ್ನುವ ವಿಷಯದಲ್ಲಿ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರದ ಸಹಾಯದಿಂದ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಲು, ಮಾಹಿತಿಗಳನ್ನು ನಿಖರವಾಗಿ ಮತ್ತು ಸರಳವಾಗಿ ಸಂಗ್ರಹಿಸಲು, ನಿರ್ವಹಿಸಲು ಸಾಧ್ಯವಾಗುತ್ತದೆ,” ಎಂಬುವುದಾಗಿ ತಿಳಿಸಿದರು.
ಫ್ಯಾಶನ್ ಡಿಸೈನ್ ವಿಭಾಗದ ಉಪನ್ಯಾಸಕಿ ಅನನ್ಯ ಭಟ್ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರು ಮತ್ತು ಪ್ರಥಮ ಫ್ಯಾಶನ್ ಡಿಸೈನ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *