ಬಾಯಾರ್ ಪದವು- ಸಜಂಕಿಲ- ಧರ್ಮತ್ತಡ್ಕ-ಪೆರ್ಮುದೆ ರಸ್ತೆಯ ಅವ್ಯವಸ್ಥೆ | ಹಣ ಮಂಜೂರಾದರೂ ಕಾಮಗಾರಿಗೆ ಹದೆಗೆಟ್ಟ ಹೊಂಡ ರಸ್ತೆಯಲ್ಲಿ ಸಂಚಾರವೇ ದುಸ್ತರ!

Share with


ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಪದವು- ಸಜಂಕಿಲ- ಧರ್ಮತ್ತಡ್ಕ-ಪೆರ್ಮುದೆ ರಸ್ತೆಯು ದಿನದಿಂದ ದಿನಕ್ಕೆ ಶೋಚನೀಯಾವಸ್ಥೆಗೆ ತಲುಪು ತಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ NABARD ಮೂಲಕ Rs.33,949,172  ಮಂಜೂರುಗೊಂಡು ಗುತ್ತಿಗೆದಾರ ಹಾಗೂ ಅಧಿಕಾರಿಗಳು ತಲುಪಿ ಸ್ಥಳ ಪರಿಶೀಲಿಸಿ ಇದೀಗ ಹಲವು ತಿಂಗಳು ಕಳೆದರೂ ಕಾಮಗಾರಿಗೆ ಮೀನ ಮೇಷ ಎಣಿಸುತ್ತಿದ್ದಾರೆ.
ಇದರಿಂದ ರೋಷಗೊಂಡ ನಾಗರಿಕರು, ವಿವಿಧ ಪಕ್ಷಗಳು, ಸಂಘಟನೆಗಳಿಂದ ಹೋರಾಟಕ್ಕೆ ಸಿದ್ಧತೆ
ಶೋಚನೀಯಾವಸ್ಥೆಗೆ ತಲುಪಿರುವುದರಿಂದ ಬಸ್ ಸಹಿತ ಇತರ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವು, ಇಕ್ಕೆಡೆಗಳಲ್ಲಿ ಬೃಹತ್ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ದಿನನಿತ್ಯಬಸ್ ಸಹಿತ ನೂರಾರು ವಾಹನಗಳು ಹರಹಾಸದಿಂದ ಸಂಚರಿಸಬೇಕಾಗಿವೆ.

ಹೋರಾಟದ ಎಚ್ಚರಿಕೆ
ಇಲ್ಲಿ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾಗರಿಕರು ಒಟ್ಟು ಸೇರಿ ಹೋರಾಟಕ್ಕೆ ಸಜ್ಜಾಗಬೇಕಾದೀತು ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ


Share with

Leave a Reply

Your email address will not be published. Required fields are marked *