ಬಾಯಾರುಪದವು-ಸಜಂಕಿಲ- ಪೆರ್ಮುದೆ ರಸ್ತೆ ಕಾಮಗಾರಿ ಶುರು

Share with


ರೂಪಾಯಿ 3,39,49,172 ಅನುದಾನ ಬಿಡುಗಡೆ


ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರುಪದವು-ಸಜ ಂಕಿಲ – ಧರ್ಮತಡ್ಕ – ಪೆರ್ಮುದೆ ರಸ್ತೆಗೆ ನಬಾರ್ಡ್ ಮೂಲಕ 3,39,49,172 ರೂ. ಅನುದಾನ ಬಿಡುಗಡೆಗೊಂಡಿದ್ದು, ಇದೀಗ ಸಜಂಕಿಲ ದಿಂದ ಬಾಯಾರು ಪದವು ತನಕ 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ.

ಅಪಾಯ ಆತಂಕ

ಆದರೆ ಪ್ರಸ್ತುತ ರಸ್ತೆಯ ಬದಿಗಳನ್ನು ವಿಸ್ತರಿಸದೆ ಹೊಸ ಚರಂಡಿ ನಿರ್ಮಿಸದೆ ಹಳೆ ಚರಂಡಿಯ ಮೇಲೆಯೇ ಹಾಕಲಾಗಿದೆ. ಜಲ್ಲಿಕಲ್ಲುಗಳನ್ನು ಸಮರ್ಪಕ ಚರಂಡಿ ನಿರ್ಮಿಸದಿದ್ದರೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುವ ಸಾಧ್ಯತೆಯಿದೆ.

5.5 ಮೀಟರ್ ಅಗಲದಲ್ಲಿ ಮೆಕ್ಕಾ ಡಾಮ್ ಮೂಲಕ ಅಭಿವೃದ್ಧಿಯಾಗುವ ಈ ರಸ್ತೆಯು ಅಲ್ಲಲ್ಲಿ ತಿರುವು ಮತ್ತು ಇಕ್ಕೆಡೆಗಳಲ್ಲಿ ಬೃಹತ್ ಹೊಂಡಗಳಿಂದ ಕೂಡಿದೆ. ಇದನ್ನೆಲ್ಲಾಸರಿಪಡಿಸಿರಸ್ತೆಯನ್ನು ಅತ್ಯಾಧುನಿಕ ಮಾದರಿಯಲ್ಲಿ ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಾಗಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *