
ಮಂಗಲ್ಪಾಡಿ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಈ ತಿಂಗಳ 22ರದು ಆರಂಭಗೊoಡ ವರ್ಷಾವಧಿ ಕ್ಷೇತ್ರೋತ್ಸವ ಜ.30ರಂದು ಸಮಾಪ್ತಿಗೊಳ್ಳಲಿದೆ. ದಿನಂಪ್ರತಿ ಪೂಜೆ, ಭಜನೆ, ಶ್ರೀ ಭೂತ ಬಲಿ ಸಹಿತ ವಿವಿಧ ವಧಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯುತ್ತಿದೆ. ದಿನನಿತ್ಯ ನೂರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಕ್ಷೇತ್ರೋತ್ಸವದ ಅಂಗವಾಗಿ ನಾಳೆ [28ರಂದು] ರಾತ್ರಿ 9ಕ್ಕೆ ಬಯ್ಯನ ಬಲಿ, ರಾಜಾಂಗಣ ಪ್ರಸಾದ, ಗ್ರಾಮಬಲಿ, ವಿಶೇಷ ಬೆಡಿ ಉತ್ಸವ, ರಾತ್ರಿ 10.30ಕ್ಕೆ ನಿತ್ಯಪೂಜೆ, ರಂಗಪೂಜೆ, ರಾತ್ರಿ 11.30ಕ್ಕೆ ಶ್ರೀ ಭೂತಬಲಿ, ಶಯನ , ಕವಾಟ ಬಂಧನ ಮೊದಲಾದ ಕಾರ್ಯಕ್ರಮಗಳು ನಡೇಯಲಿದೆ.