ಪೈವಳಿಕೆ: ಬಾಯಿಕಟ್ಟೆ ಪಾಂಡ್ಯಡ್ಕ ನಿವಾಸಿ ಬೀಡಿ ಗುತ್ತಿಗೆದಾರ, ಸಿಪಿಐ ಹಿರಿಯ ಕಾರ್ಯಕರ್ತ ನಾರಾಯಣ ಬೆಳ್ಚಪ್ಪಾಡ [೭೩] ಅಸೌಖ್ಯದಿಂದ ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ಧೇಶಕರಾಗಿದ್ದರು. ಮೃತರು ಪತ್ನಿ ಗೌರೀ, ಮಕ್ಕಳಾದ ಪ್ರವೀಣ, ಪ್ರವಿತ, ಪ್ರಶಾಂತ್, ಅಳಿಯ ಯಾದವ್, ಸೊಸೆಯಂದಿರಾದ ರಶ್ಮಿ, ಸುಮಿತ್ರ, ಸಹೋದರ, ಸಹೋದರಿಯರಾದ ಕಮಲ, ದೇಜಪ್ಪ, ಸುಮತಿ, ಉದಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ.ಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿಗಳಾದ ಸಿ.ಪಿ.ಬಾಬು, ಸಹ ಕಾರ್ಯದರ್ಶಿ ವಿ.ರಾಜನ್, ಮಾಜಿ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಫಿಲ್, ಮಂಜೇಶ್ವರಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಜಿಲ್ಲಾಸಮಿತಿಸದಸ್ಯ ಅಜಿತ್ ಎಂಸಿ ಲಾಲ್ ಬಾಗ್ , ಮಂಡಲ ಸದಸ್ಯ ಲೌರೆನ್ಸ್ ಡಿ ಸೋಜ, ಮುಸ್ತಾಫ ಕಡಂಬಾರ್, ಸಿಪಿಐ ಪೈವಳಿಕೆ ಲೋಕಲ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಸಹ ಕರ‍್ಯರ‍್ಶಿ ಅಶ್ವಥ್ ಪೂಜಾರಿ ಲಾಲ್ ಬಾಗ್, ಸದಸ್ಯರಾದ ರವಿ ಮಾಂತೇರೋ, ಪಂಚಾಯತ್ ಸದಸ್ಯರಾದ ಸುನೀತಾ ವಲ್ಟಿ ಡಿ ಸೋಜ, ಸಿ.ಐ.ಟಿ.ಯು ನೇತಾರ ಚಂದ್ರನಾಯ್ಕ್ ಮಾನಿಪ್ಪಾಡಿ ಮೊದಲಾದವರು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.