ಬೆಳ್ತಂಗಡಿ:   ಬಂದಾರು ಬೋಲೋಡಿ ಸೇತುವೆ ಪಕ್ಕದ ಗುಡ್ಡ ಕುಸಿತ – ರಸ್ತೆ ಸಂಚಾರ ಬಂದ್

Share with

ಬಂದಾರು : ಜು 18 ಬಂದಾರು ಗ್ರಾಮದ
ಮೈರೋಳಡ್ಕಶಿವನಗರ – ಪೆರ್ಲಬೈಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯ ಬೋಲೋಡಿ ಎಂಬಲ್ಲಿನ ಸೇತುವೆ ಪಕ್ಕದಲ್ಲಿ ರಾತ್ರಿ ಸುರಿದ ವಿಪರೀತ ಮಳೆಯ ಪರಿಣಾಮ ಗುಡ್ಡ ಕುಸಿದು ಈ ರಸ್ತೆಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಸ್ಥಳಕ್ಕೆ

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ರವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಮುಗೋಡಿ ಕನ್ ಸ್ಟ್ರಕ್ಷನ್ ನವರಿಗೆ ತಿಳಿಸಿದಾಗ ಮಣ್ಣು ತೆರವು ಕಾರ್ಯಕ್ಕೆ ಸ್ಥಳಕ್ಕೆ ಜೆಸಿಬಿ, ಟಿಪ್ಪ‌ರ್ ಕಳುಹಿಸಿಕೊಡುವುದಾಗಿ ತಿಳಿಸಿರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೆ ಸ್ಥಳದಲ್ಲಿ ಇನ್ನಷ್ಟು ಭಾರಿ ಗಾತ್ರ ಗುಡ್ಡ ಕುಸಿಯುವ ಲಕ್ಷಣ ಕಾಣಿಸ್ತಾ ಇದೆ, ಈ ಭಾಗದಲ್ಲಿ ಸಂಚರಿಸುವವರು ಸ್ವಲ್ಪ ಎಚ್ಚರಿಕೆಯಿಂದ ಸಂಚಾರಿಸಬೇಕಾಗಿದೆ ಸಂಬಂಧಪಟ್ಟ ಇಲಾಖೆಯು ಇದರ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ, ಜೂನ್ ತಿಂಗಳಲ್ಲಿ ಇದೆ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗಿರುವ ವರದಿಯಾಗಿತ್ತು.


Share with

Leave a Reply

Your email address will not be published. Required fields are marked *