ಬೆಳ್ತಂಗಡಿ – ಅಪ್ರಾಪ್ತ ಕಾಲೇಜ್ ವಿದ್ಯಾರ್ಥಿನಿಗೆ ಕಿರುಕುಳ : ಆರೋಪಿ ಅರೆಸ್ಟ್

Share with

ಬೆಳ್ತಂಗಡಿ : ಖಾಸಗಿ ಕಾಲೇಜ್ ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತಿದಾರ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಖಾಸಗಿ ಕಾಲೇಜಿನ 17ರ ಹರೆಯದ ವಿದ್ಯಾರ್ಥಿ ನಿಗೆ ಕಾರ್ಕಳ ನಿವಾಸಿ ಸೈಯ್ಯದ್ (24) ಎಂಬಾತ ಕಳೆದ ಕೆಲವು ದಿನಗಳಿಂದ‌ ನಿರಂತರ ಮೆಸೇಜ್ ಹಾಕುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಉಜಿರೆಯಲ್ಲಿ ಆರೋಪಿ ಸಯ್ಯದ್(24) ಎಂಬಾತನನ್ನು ಪತ್ತೆಹಚ್ಚಿ ಹಿಗ್ಗ ಮುಗ್ಗ ಥಳಿಸಿದ್ದಾರೆ.

ಬಳಿಕ ಈತನನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಹಲವರು ಯುವತಿಯರ ಹಾಗೂ ಆತನ ಅಶ್ಲೀಲ ಫೋಟೋ, ವಿಡಿಯೋಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *