ಬೆಂಗಳೂರು: ರಾಜ್ಯದಲ್ಲೇ ಭುಗಿಲೆದ್ದಿರುವ ಧರ್ಮಸ್ಥಳ ಮಣ್ಣಸಂಕದ ಬಳಿ ಅ. 9ರ 2012ರಲ್ಲಿ ನಡೆದಿರುವ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಿದ್ದಾರೆ.
ಆರೋಪಿಯೆಂದು ಸಂತೋಷ್ ರಾವ್‌ಅವರನ್ನು ಪರಿಗಣಿಸಿದ್ದು, ಬಳಿಕ ಸಿಬಿಐ ತನಿಖೆ ವೇಳೆ ಸೋತೋಷ್ ರಾವ್ ದೋಷಮುಕ್ತರಾಗಿದ್ದಾರೆ. ಹಾಗಾದರೆ, ಹತ್ಯೆ ಮಾಡಿದವರಾರು ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಶಾಸಕರಿಬ್ಬರು ಕೂಡಲೇ ಪ್ರಕರಣ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಮಾಡಿದ್ದಾರೆ