ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?

Share with

ಬೆಂಗಳೂರು, ಜನವರಿ 12: ಬೆಂಗಳೂರಿನ (Bangalore) ಜನರು ಅತಿಯಾಗಿ ಜಿಗುಪ್ಸೆಗೆ ಒಳಗಾಗುವುದು ಇಲ್ಲಿನ ಸಂಚಾರ (Traffic) ದಟ್ಟಣೆಯಿಂದ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದೀಗ ಪ್ರಮುಖ ಭಾಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಿದೆ. ಒಟ್ಟು ಸುಮಾರು 75 ಕಿಲೋ ಮೀಟರ್ ಉದ್ದದ 5 ಎತ್ತರಿಸಿದ ರಸ್ತೆಗಳು ಅಥವಾ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ವಹಿಸಲಾಗಿದೆ.

ಎಲ್ಲೆಲ್ಲಿ ಎಲಿವೇಟೆಡ್ ಕಾರಿಡಾರ್?

  • ನಾಗವಾರ ಜಂಕ್ಷನ್ – ನ್ಯೂ ಏರ್ಪೋರ್ಟ್ ರಸ್ತೆ (17.94 ಕಿ.ಮೀ)
  • ಹಲಸೂರು ಕೆರೆ ಜಂಕ್ಷನ್- ಬಾಗಲೂರು (27.19 ಕಿ.ಮೀ)
  • ಹಳೆ ಮದ್ರಾಸ್ ರಸ್ತೆ – ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ (10.81 ಕಿ.ಮೀ)
  • ಸಿರ್ಸಿ ಸರ್ಕಲ್ – ಸ್ಯಾಟಲೈಟ್ ಬಸ್ ಸ್ಟ್ಯಾಂಡ್ (5.22 ಕಿ.ಮೀ)
  • ರಾಗಿಗುಡ್ಡ ಜಂಕ್ಷನ್ – ಕನಕಪುರ ಮುಖ್ಯರಸ್ತೆ (18.47 ಕಿ.ಮೀ)

ಇನ್ನು ಹೊಸ ಎಲಿವೇಟೆಡ್​ ರಸ್ತೆಗಳು ನಗರದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವ ನಿರೀಕ್ಷೆಯಿದೆ. ಆದರೆ, ಇವುಗಳ ನಿರ್ಮಾಣದ ಬಳಿಕ ಟೋಲ್​ ಸಂಗ್ರಹ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮೂಲಕ ದುಬಾರಿ ಕಾಮಗಾರಿಯ ವೆಚ್ಚವನ್ನು ಸವಾರರಿಂದಲೇ ವಸೂಲಿ ಮಾಡುವ ಚಿಂತನೆ ಕೂಡ ಸರ್ಕಾರದ್ದಾಗಿದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *