
ಕೆಲಸಗಾರರಾಗಿರಲಿ ಅಥವಾ ಇಂಟರ್ನ್‌ಶಿಪ್ ಮಾಡುವವರಾಗಿರಲಿ ಯಾವುದೇ ಕಂಪೆನಿಯನ್ನು ತೊರೆಯುವಾಗ ಕಂಪೆನಿಯ ಒಂದಷ್ಟು ಪ್ರಕ್ರಿಯೆಗಳನನ್ನು ಪಾಲಿಸಬೇಕಾಗುತ್ತದೆ. ಸಡನ್ ಆಗಿ ಕೆಲಸ ಬಿಡಲು ಆಗುವುದಿಲ್ಲ. ಆದ್ರೆ ಇಲ್ಲೊಂದು ಇಂಟರ್ನ್ ಸ್ವಂತ ಸ್ಟಾರ್ಟ್ ಅಪ್ ನಡೆಸಲು ಹಣ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದು, ಇನ್ಮುಂದೆ ನನಗೆ ನಿಮ್ಮ ಇಂಟರ್ನ್‌ಶಿಪ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇಂಟರ್ನ್ ಹಾಗೂ ಬಾಸ್ ಮಧ್ಯೆ ನಡೆದ ಈ ವಾಟ್ಸಾಪ್ ಚಾಟ್ ಇದೀಗ ವೈರಲ್ ಆಗುತ್ತಿದೆ.
Viral Post: ಸ್ವಂತ ಸ್ಟಾರ್ಟ್‌ಅಪ್ ನಡೆಸಲು ಹಣ ಸಿಕ್ಕಿತೆಂದು ಹೇಳದೆ ಕೇಳದೆ ಕೆಲಸ ಬಿಟ್ಟ ಬೆಂಗಳೂರಿನ ಇಂಟರ್ನ್ ಕಾಲೇಜು ಜೀವನ ಮುಗಿಯುತ್ತಿದ್ದಂತೆ ಹೆಚ್ಚಿನವರು ಕೆಲಸದ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಒಂದಷ್ಟು ತಿಂಗಳುಗಳ ಕಾಲ ವಿವಿಧ ಕಂಪೆನಿಗಳಲ್ಲಿ ಇಂಟರ್ನ್‌ಶಿಪ್ ಮಾಡುತ್ತಾರೆ. ಇಲ್ಲಿ ಇಂಟರ್ನ್‌ಗಳು ಸರ್ಟಿಫಿಕೇಟ್ ಮಾತ್ರವಲ್ಲದೆ ವಿವಿಧ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಇಂಟರ್ನ್‌ಶಿಪ್ ನಡುವೆ ಒಂದೊಳ್ಳೆ ಉದ್ಯೋಗ ಸಿಕ್ಕಿದ್ರೆ ಹೆಚ್ಚಿನವರು ಇಂಟರ್ನ್‌ಶಿಪ್ ಪೂರ್ಣಗೊಳಿಸದೆ ಆ ಉದ್ಯೋಗಕ್ಕೆ ಹೋಗಲ್ಲ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಂಟರ್ನ್ ಸ್ಟರ್ಟ್‌ಅಪ್ ನಡೆಸಲು ಧನ ಸಹಾಯ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ, ಕೌಶಲ್ಯಗಳನ್ನು ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದು, ಇನ್ಮುಂದೆ ನನಗೆ ನಿಮ್ಮ ಇಂಟರ್ನ್‌ಶಿಪ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇಂಟರ್ನ್ ಹಾಗೂ ಬಾಸ್ ಮಧ್ಯೆ ನಡೆದ ಈ ವಾಟ್ಸಾಪ್ ಚಾಟ್ ಇದೀಗ ವೈರಲ್ ಆಗಿದ್ದು, ಸ್ಟಾರ್ಟ್ ಅಪ್ ನಡೆಸುವ ಮುನ್ನ ಒಬ್ಬರ ಜೊತೆ ಹೇಗೆ ಮಾತಾಡಬೇಕು ಎಂಬುದು ಆತ ಕಲಿಯಬೇಕಿದೆ ಎಂದು ನೆಟ್ಟಿಗರು ಹೇಳಿದ್ದಾರೆ.