ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 50 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ!

Share with

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ವಲಯದ ಎನ್‌ಸಿಬಿ (NCB) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ (Drug) ಜಪ್ತಿ ಮಾಡಿದ್ದಾರೆ. ಜೊತೆಗೆ ಮೂವರು ಪ್ರಮುಖ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.


ಸದ್ಯ ಬಂಧಿತರಿಂದ ಒಟ್ಟು 45 ಕೆಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ. ಥೈಲ್ಯಾಂಡ್‌ನಿಂದ ಡ್ರಗ್ಸ್‌ ಸಾಗಾಟ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಮಾಹಿತಿಯಂತೆ ಅ.9ರಂದು ಕೊಲಂಬೋದಿಂದ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಈ ಇಬ್ಬರಿಂದ 31 ಕೆಜಿ ಹೈಡ್ರೋಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಲಾಗಿದ್ದು, ಇಬ್ಬರ ವಿಚಾರಣೆ ವೇಳೆ ಮುಂದಿನ ವಿಮಾನದಲ್ಲಿ ಹ್ಯಾಂಡ್ಲರ್ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಅದರಂತೆ ಕಾದು ಇನ್ನೋರ್ವ ಶ್ರೀಲಂಕಾ ಪ್ರಜೆಯನ್ನು ಕೂಡ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಲಂಕಾದ ಹ್ಯಾಂಡ್ಲರ್ನಿಂದ ತಂದಿದ್ದ 14 ಕೆ.ಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆ, 250 ಫುಡ್ ಟಿನ್ಗಳಲ್ಲಿ ತಂದಿದ್ದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

100 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಎನ್‌ಸಿಬಿ
ಬೆಂಗಳೂರು ಎನ್‌ಸಿಬಿ ಘಟಕವು ಈ ವರ್ಷದಲ್ಲಿ ಇದುವರೆಗೆ ಒಟ್ಟು 18 ಪ್ರಕರಣಗಳಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. 18 ಪ್ರಕರಣಗಳಲ್ಲಿ 45 ಆರೋಪಿಗಳನ್ನ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೇರಳ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

23 ಕೋಟಿ ರೂ. ಮೌಲ್ಯದ ಡ್ರಗ್ ಸೀಜ್: 6 ಮಂದಿ ಅರೆಸ್ಟ್
ಇತ್ತೀಚೆಗೆ ಸಿಸಿಬಿ ಹಾಗೂ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ 6 ಜನರನ್ನು ಬಂಧಿಸಿದ್ದರು. ಕೆಜಿ ನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿ ಹೆಚ್ಚಿನ ಹಣ ಗಳಿಸುತ್ತಿದ್ದ ರಶೀದ್ ಎಂಬಾತನನ್ನು ಬಂಧಿಸಿ ಏಳು ಕೆಜಿ ಹೈಡ್ರೋ ಗಾಂಜಾ ಸೀಜ್ ಮಾಡಿದ್ದರು.


Share with

Leave a Reply

Your email address will not be published. Required fields are marked *