ಬಂಟ್ವಾಳ: ಬೆಂಜನಪದವು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕನ್ನಡ ಕ್ಲಾಂತ ಚಿತ್ರದ ತುಳು ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಪ್ರಯುಕ್ತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಕ್ಲಾಂತ ಚಿತ್ರ ತಂಡ ಕ್ಷೇತ್ರಕ್ಕೆ ಭೇಟಿ ನೀಡಿದರು. ರಾಜೇಶ್ ಕೃಷ್ಣನ್ ಅವರು ತುಳು ಹಾಡನ್ನು ಹಾಡಿದ್ದು ಸ್ವತಃ ಅವರೇ ಕೊರಗಜ್ಜ ಕ್ಷೇತ್ರದಲ್ಲಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.
ಕ್ಷೇತ್ರದ ಧರ್ಮದರ್ಶಿ ವಿಜಯ್ ಕೆ. ಅವರು ದೈವದ ಕರಿಗಂಧ ಪ್ರಸಾದವನ್ನು ಚಿತ್ರ ತಂಡ ಹಾಗೂ ರಾಜೇಶ್ ಕೃಷ್ಣನ್ ಅವರಿಗೆ ನೀಡಿದರು. ಬಳಿಕ ಬೆಂಜನಪದವು ಕೊರಗಜ್ಜ ಕ್ಷೇತ್ರ ಹಾಗೂ ಕ್ಲಾಂತ ಚಿತ್ರ ತಂಡದ ವತಿಯಿಂದ ರಾಜೇಶ್ ಕೃಷ್ಣನ್ ಅವರನ್ನು ಗೌರವಿಸಲಾಯಿತು.