ಪೈವಳಿಕೆ: ಉರಿಯದೆ ಉಪಯೋಗ ಶೂನ್ಯಗೊಂಡ ಬೀದಿ ದೀಪದಿಂದ ಬೆರಿಪದವು ಜಂಕ್ಷನ್ ಕತ್ತಲಮಯಾಗಿದೆ. ಪೈವಳಿಕೆ ಪಂಚಾಯತ್ನ 7ನೇ ವಾರ್ಡ್ ಬೆರಿಪದವು ಜಂಕ್ಷನ್ನಲ್ಲಿರುವ ಬೀದಿ ದೀಪ ಕೆಟ್ಟುಹೋಗಿ ಕತ್ತಲೆಯಿಂದ ಊರವರು ಸಮಸ್ಯೆಗೀಡಾಗಿದ್ದಾರೆ.


ಕಳೆದ ಒಂದು ತಿಂಗಳ ಹಿಂದೆ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಗುತ್ತೆದಾರ ದೀಪವನ್ನು ದುರಸ್ಥಿಗೊಸಲಾಗಿದ್ದು, ಬೆರಿಪದವ್ನಲ್ಲಿ ಕೆಲವೇ ವಾರದಲ್ಲಿ ಅದು ಮತ್ತೆ ಹಾನಿಗೀಡಾಗಿರುವುದಾಗಿ ದೂರಲಾಗಿದೆ. ರಾತ್ರಿ ಹೊತ್ತಲ್ಲಿ ಪೇಟೇಗೆ ತಲುಪುವ ಜನರು ಆತಂಕಕ್ಕೀಡಾಗಿದ್ದಾರೆ. ಅಲೆಮಾರಿ ನಾಯಿಗಳ ಕಾಟ ಅಧಿಕವಾಗಿದ್ದು, ಕತ್ತಲೆಯಲ್ಲಿ ನಡೆದು ಹೋಗಲು ಭಯ ಪಡುತ್ತಿದ್ದಾರೆ.
ಬೀದಿ ದೀಪ ಕಳೆಪೆಯಾಗಿರುವುದಾಗಿ ಆರೋಪಿಸಲಾಗಿದೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಬೀದಿ ದೀಪ ದುರಸ್ಥಿಗೊಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಊರವರು ಆಗ್ರಹಿಸಿದ್ದಾರೆ. ಪಂಚಾಯತ್ ಅಧಿಕಾರಿಯವರಲ್ಲಿ ದೀಪ ದುರಸ್ಥಿಗೆ ಕ್ರಮಕೈಗೊಳ್ಳಲು ಒತ್ತಾಯಿಸಿರುವುದಾಗಿ ವಾರ್ಡ್ ಸದಸ್ಯೆ ಜಯಲಕ್ಷ್ಮಿ ಭಟ್ ತಿಳಿಸಿದ್ದಾರೆ.




