ಭಾರತ್‌ ಬ್ಯಾಂಕ್‌ ಸೂರ್ಯಕಾಂತ್‌ ಜಯ ಸುವರ್ಣರವರಿಗೆ ಬೆಸ್ಟ್‌ ಚೇರ್ ಮೇನ್‌ ಪ್ರಶಸ್ತಿ

Share with

ಮಂಗಳೂರು: ಸೂರ್ಯಕಾಂತ್ ಜಯಸುವರ್ಣ ಅವರ ಅಧ್ಯಕ್ಷತೆಯಲ್ಲಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ಭಾರತ್‌ ಬ್ಯಾಂಕ್‌ ಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ. “ಭಾರತ ರತ್ನ ಸಹಕಾರಿತ ಸನ್ಮಾನ-2024” ರಲ್ಲಿ ಬಹು-ರಾಜ್ಯ ಅನುಸೂಚಿತ ಸಹಕಾರಿ ಬ್ಯಾಂಕ್‌ಗಳ ವಿಭಾಗದಲ್ಲಿ “ಕಾಪರೇಟಿವ್‌ ಬ್ಯಾಂಕ್‌ ಸಮ್ಮಿಟ್‌” ನಲ್ಲಿ ಬೆಸ್ ಚ್ಯಾರ್‌ಮೆನ್ ಅವಾರ್ಡ್‌ಅನ್ನು ಸೂರ್ಯಕಾಂತ್‌ ಜಯಸುವರ್ಣ ಪಡೆದುಕೊಂಡಿದ್ದಾರೆ. ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕ ಸುಮ್ನೇಶ್ ಜೋಶಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 

ಈ ಹಿಂದೆ 1991ರಲ್ಲಿ ಬ್ಯಾಂಕ್ ಜವಬ್ದಾರಿಯನ್ನು ಹೊತ್ತಿದ್ದ ಜಯ ಸುವರ್ಣರವರಿಗೆ ‘ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌’ ಲಭಿಸಿತ್ತು. ಕಾರ್ಪರೇಟಿವ್‌ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್  ಮೊಟ್ಟ ಮೊದಲು ಆರ್‌ಬಿಐನಿಂದ ಮಾನ್ಯತೆ ಪಡೆದ ಹೆಗ್ಗಳಿಕೆ ಕೂಡಾ ಇದೆ. ಇದೀಗ ಜಯ ಸುವರ್ಣರವರ ಬಳಿಕ ಕಾರ್ಪರೇಟ್‌ ಬ್ಯಾಂಕ್‌ ವಲಯದಲ್ಲಿ ಬೆಸ್ಟ್ ಚ್ಯಾರ್‌ಮ್ಯಾನ್ ಅವಾರ್ಡ್‌ ಅನ್ನು ಸೂರ್ಯಕಾಂತ್ ಜಯಸುವರ್ಣ ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆ(23) ಭಾರತ್‌ ಬ್ಯಾಂಕ್‌ ಗೆ 25 ವರ್ಷ ಪೂರೈಸಿದ ಸಂಭದ್ರದ ದಿನವಾಗಿದ್ದು ಅಂದೇ ಈ ಪ್ರಶಸ್ತಿ ಲಭಿಸಿರುವುದು ಬಹಳ ವಿಶೇಷ. ಭಾರತ್ ಬ್ಯಾಂಕ್ ಇಂದು ದೇಶದ ಹಲವು ರಾಜ್ಯಗಳಲ್ಲಿ 100 ಕ್ಕೂ ಅಧಿಕ ಬ್ರಾಂಚ್‌ಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.


Share with

Leave a Reply

Your email address will not be published. Required fields are marked *