ಬೆತ್ ಮೂನಿ, ಸೋಫಿ ಡಿವೈನ್ ವಿಕೆಟ್ ಉರುಳಿಸಿದ ಸಯಾಲಿ ಸತ್ಘರೆ

Share with

ಮಹಿಳಾ ಪ್ರೀಮಿಯರ್ ಲೀಗ್ನ 12ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಎರಡನೇ ಓವರ್ನಲ್ಲೇ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎಂದಿನಂತೆ ಆರ್ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್ ಬೌಲ್ ಮಾಡಿದರು. ಈ ಓವರ್ನಲ್ಲಿ ಗುಜರಾತ್ ಕೇವಲ 3 ರನ್ ಕಲೆಹಾಕಿತ್ತು. ಹೀಗಾಗಿ ಎರಡನೇ ಓವರ್ನಲ್ಲಿ ರನ್ ಕಲೆಹಾಕಲೇಬೇಕಾದ ಒತ್ತಡದಲ್ಲಿದ್ದ ಗುಜರಾತ್ ಓಪನರ್ ಬೆತ್ ಮೂನಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಓವರ್ನ ಮೊದಲ ಎಸೆತದಲ್ಲೇ ಕ್ಲಿನ್ ಬೌಲ್ಡ್ ಆದರು. ನಂತರ ಸ್ಟ್ರೈಕ್ಗೆ ಬಂದ ಮತ್ತೊಬ್ಬ ಓಪನರ್ ಸೋಫಿ ಡಿವೈನ್ ಕೂಡ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಮೂನಿ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಡಿವೈನ್ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಎರಡೂ ವಿಕೆಟ್ಗಳು ಭಾರತೀಯ ಬೌಲರ್ ಸಯಾಲಿ ಸತ್ಘರೆಗೆ ಬಿದ್ದವು.


Share with

Leave a Reply

Your email address will not be published. Required fields are marked *