ಅಕ್ಷಯ ಕಾಲೇಜು ಪುತ್ತೂರು ಸಂಸ್ಕೃತ ಸಂಘದಿಂದ ಆಯೋಜಿಸಲಾದ ಪುತ್ತೂರು ತಾಲೂಕು ಪ್ರೌಢಶಾಲಾ ಮಟ್ಟದ ಭಗವದ್ಗೀತಾ ಕಂಠಪಾಠ

Share with

ಅಕ್ಷಯ ಕಾಲೇಜು ಪುತ್ತೂರು ಇದರ “ವಾಗ್ವೈಭವ” ಸಂಸ್ಕೃತ ಸಂಘದಿಂದ ಆಯೋಜಿಸಲಾದ ಪುತ್ತೂರು ತಾಲೂಕು ಪ್ರೌಢಶಾಲಾ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ನವೆಂಬರ್ 29ರಂದು ಆಯೋಜಿಸಲಾಗಿತ್ತು. ಮೊದಲಿಗೆ ದ್ವಿತೀಯ ಬಿಕಾಂ ಸಂಸ್ಕೃತ ವಿದ್ಯಾರ್ಥಿಯಾದ ಉದಿತ್ ಎಂ ಪ್ರಾಂಶುಪಾಲರಿಗೆ ಹೂ ನೀಡಿ ಸ್ವಾಗತಿಸಿದರು. ಅಂತೆಯೇ ಆಗಮಿಸಿದ ನಿರ್ಣಾಯಕರಿಗೆ ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿ ಕುಮಾರಿ ಯಶಸ್ವಿ ಬಿಕೆ ಹಾಗೂ ಖಜಾಂಚಿಯಾದ ಕುಮಾರಿ ರಕ್ಷ ಕೆ ಆರ್ , ಹೂ ನೀಡಿ ಸ್ವಾಗತಿಸಿದರು.

ಕಾರ್ಯದರ್ಶಿ ಕುಮಾರಿ ಅಪೇಕ್ಷ ಶೆಟ್ಟಿ ಸಂಸ್ಕೃತ ಸಂಘದ ಸಂಯೋಜಕಿ ಗೂ ಹೂ ನೀಡಿದರು.ಅಕ್ಷಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ನಿರ್ಣಾಯಕರಾಗಿ ಶ್ರೀಮತಿ ಶಾಂಭವಿ ಮತ್ತು ಶ್ರೀಮತಿ ಸುಮಾ ಹಾಗೂ ಸಂಸ್ಕೃತ ಸಂಘದ ಸಂಯೋಜ ಕಿಯಾ ಶ್ರೀಮತಿ ಸಾಯಿಕೃಪಾ ಕೆ. ಅವರು ಭಾಗವಹಿಸಿದ್ದರು. ವಿವಿಧ ಶಾಲೆಗಳಿಂದ ಆಗಮಿಸಿದ ಸ್ಪರ್ಧಾ ಳುಗಳಿಂದ ಸಾಂಗವಾಗಿ ನಡೆಯಿತು.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಸ್ಕೃತ ಸಂಘದ ಸಂಯೋಜಕಿಯು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು. ಅಲ್ಲದೆ ವಿಜೇತರಿಗೆ ಡಿಸೆಂಬರ್ 8 ರಂದು ನಡೆಯಲಿರುವ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಲಾಗುವುದೆಂದು ಘೋಷಿಸಿದರು.
ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿಯಾದ ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿಯಾದ ರಶ್ಮಿರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು.


Share with

Leave a Reply

Your email address will not be published. Required fields are marked *