ಉಪ್ಪಳ: ಧಾರ್ಮಿಕ, ಸಮಾಜಿಕ ಮುಂದಾಳು ಕೃಷ್ಣಶಿವಕೃಪ ಕುಂಜತ್ತೂರು ಇವರ ಸಾರಥ್ಯದಲ್ಲಿ ರಾಷ್ಟç ಭಕ್ತಿಯ ಜಾಗೃತಿಗಾಗಿ ದೇಶ ಪ್ರೇಮ, ದೇವ ಭಕ್ತಿ, ಸನಾತನ ಧರ್ಮ ಎಂಬ ದ್ಯೇಯ ವಾಕ್ಯದೊಂದಿಗೆ ನೂತನವಾಗಿ ಮಂಜೇಶ್ವರದಲ್ಲಿ ಭಾರತಾಂಬಾ ಭಜನಾ ತಂಡಕ್ಕೆ ಚಾಲನೆ ನೀಡಿದ್ದಾರೆ. ಇದರ ಉದ್ಘಾಟನೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ಶ್ರೀ ಮಹಾಗಣಪತಿ ದೇವರಿಗೆ ಮೂರು ಸೇರು ಅಕ್ಕಿಯ ಅಪ್ಪ ಸೇವೆ ಮತ್ತು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವರಿಗೆ ದೊಡ್ಡ ಕಾರ್ತಿಕ ಪೂಜೆಯನ್ನು ಸಲ್ಲಿಸಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ಗಂಟೆ ತನಕ ಮೊದಲ ಭಜನೆ ಸಂಕೀರ್ತನೆಯನ್ನು ಮಾಡುವ ಮೂಲಕ ಚಾಲನೆಯನ್ನು ನೀಡಿದ್ದಾರೆ. ಭಜನಾ ತಂಡದ ಸಾರಥ್ಯವನ್ನು ವಹಿಸಿದ ಕೃಷ್ಣ ಶಿವಕೃಪ ಹಾಗೂ ಸದಸ್ಯರಿಗೆ ಶ್ರೀ ಕ್ಷೇತ್ರದ ಸಿಬ್ಬಂದಿವರ್ಗ, ಅರ್ಚಕರ ವೃಂದ, ಅಡಳಿತ ಸಮಿತಿಯಿಂದ ಗೌರವವನ್ನು ಸಲ್ಲಿಸಿದ್ದಾರೆ. ಅದೇ ರೀತಿ ಭಜನಾ ತಂಡದಿoದಲೂ ದನ್ಯವಾದವನ್ನು ಸಲ್ಲಿಸಿದರು. ತಂಡದಲ್ಲಿ ಸುಮಾರು 50 ಮಂದಿ ಸದಸ್ಯರಿದ್ದಾರೆ.