ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ನೂತನ ಮಹಾದ್ವಾರ ನಿರ್ಮಾಣಕ್ಕೆ ‘ಭೂಮಿ ಪೂಜೆ’

Share with

ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ನೂತನ ಮಹಾದ್ವಾರದ ನಿರ್ಮಾಣದ ಸಲುವಾಗಿ ‘ಭೂಮಿ ಪೂಜೆ’ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆಯವರು ವೈದಿಕ ಕಾರ್ಯ ನೆರವೇರಿಸಿದರು.

ಕೃಷ್ಣ ಭಟ್ ಕಣ್ವತೀರ್ಥ ಉಪಸ್ಥಿತರಿದ್ದರು. ಮಹಾದ್ವಾರದ ದಾನಿಗಳಾದ ಕೊಳಕೆಗುತ್ತು ಶ್ರೀ ಕೇಶವ ಶಂಕರ ಆಳ್ವ ಮತ್ತು ಮನೆಯವರು ಕೆಸರು ಕಲ್ಲು ಹಾಸಿ, ಹಾಲೆರೆಯುವ ಮೂಲಕ ಭೂಮಿ ಪೂಜೆಯ ಕಾರ್ಯ ನೆರವೇರಿತು. ಈ ವೇಳೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕಿರಣ್ ಶೆಟ್ಟಿ ಮಾಡ, ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಬೋಳ್ನಾಡು ಗುತ್ತು, ದಯಾಕರ ಮಾಡ, ಯೋಗೀಶ್ ಪಳ್ಳ, ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ: ಪಿ. ಸುನಿಲ್ ಕುಮಾರ್, ಗಡಿ ಪ್ರಧಾನರಾದ: ತಿಮ್ಮ ಭಂಡಾರಿ, ಮಂಜ ರೈ, ಕುಂಞಿಣ್ಣ ಚೌಟ, ಮುಂಡ ಶೆಟ್ಟಿ, ಅರ್ಚಕರಾದ ಬೀರು ಚೌಟ, ದರ್ಶನ ಪಾತ್ರಿಗಳಾದ: ರಾಜ ಬೆಲ್ಚಪ್ಪಾಡ, ತಿಮಿರಿ ಬೆಲ್ಚಪ್ಪಾಡ, ಮಂಜು ಬೆಲ್ಚಪ್ಪಾಡ, ದಾನಿಗಳಾದ ಕೇಶವ ಆಳ್ವ, ಶಂಕರ ಆಳ್ವ, ವಿಠಲ ಆಳ್ವ, ಕ್ಷೇತ್ರದ ಬ್ರಹ್ಮಸಭೆ, ಗಡಿಪ್ರಧಾನರು, ಗುರಿಕಾರರು, ಆಚಾರಪಟ್ಟವರು, ಕ್ಷೇತ್ರದ ಮಾಜಿ ಮೊಕ್ತೇಸರ ಡಾ. ಜಯಪಾಲ ಶೆಟ್ಟಿ, ರಘು ಶೆಟ್ಟಿ ಕುಂಜತ್ತೂರು, ಉಮೇಶ್ ಶೆಟ್ಟಿ ಹೊಸಬೆಟ್ಟು, ನಾಲ್ಕು ಗ್ರಾಮದ ಸಮಸ್ತ ಭಕ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಮಾತೆಯರು, ಮಹನೀಯರು ಉಪಸ್ಥರಿದ್ದರು.
ಚಿತ್ರಗಳು: ರವಿ “ಸೌಪರ್ಣಿಕಾ” ಮಾಡ.


Share with

Leave a Reply

Your email address will not be published. Required fields are marked *