ಟೀಮ್ ಜೋಶ್ ಕಾಸರಗೋಡು ವಿಶ್ವಕರ್ಮ ಪ್ರೀಮಿಯರ್ ಲೀಗ್ – ಕ್ರಿಕೆಟ್ ಪಂದ್ಯಾಟಕ್ಕೆ ತಂಡಗಳ ಹರಾಜು ಪ್ರಕ್ರಿಯೆ

Share with

ಕುಂಬಳೆ: ಟೀಮ್ ಜೋಶ್ ಕಾಸರಗೋಡುವಿನ ನೇತೃತ್ವದಲ್ಲಿ ಮಾರ್ಚ್ 15 ಆದಿತ್ಯವಾರದಂದು ಕುಂಬಳೆ ಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ನಡೆಯಲಿದೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25,000 ನಗದು ಹಾಗೂ ಫಲಕ, ದ್ವಿತೀಯ ಬಹುಮಾನ 15,000 ಹಾಗೂ ಫಲಕ ದೊರೆಯಲಿದೆ. ಕ್ರೀಡೆಯ ಪೂರ್ವಭಾವಿಯಾಗಿ ಸ್ಪರ್ಧಿಸುವ ತಂಡಗಳ ಹರಾಜು ಪ್ರಕ್ರಿಯೆಯು ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ಫೈರ್ ಬ್ಲ್ಯಾಸ್ಟರ್ ಮಧೂರು, ಟೀಮ್ ಶ್ಲಾಘ, ಯಂಗ್ ಸ್ಟಾರ್ಸ್ ಕಾಸರಗೋಡು, ವಿಕೆ ಬ್ರದರ್ಸ್ ಮಂಜೇಶ್ವರ, ವಿಸಿಸಿ ಪುತ್ತೂರು, ಟೀಮ್ ನೆಲ್ಲಿಸ್ಥಳ, ಟೀಮ್ ದಿಯಾ ಜೆಪಿ ನಗರ, ಆದಿಶಕ್ತಿ ಬ್ರದರ್ಸ್ ಬಾಡೂರು, ಮಹಮ್ಮಾಯಿ ಮಂಗಳೂರು, ಯುವಕ ಸಂಘ ಮಧೂರು ಎಂಬೀ ತಂಡಗಳಿಗೆ ಲೀಗ್ ಮಾದರಿಯ ಪಂದ್ಯಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *