ದರ್ಶನ್ ಗ್ಯಾಂಗ್‌ನ 5 ಆರೋಪಿಗಳಿಗೆ ಬಿಗ್ ರಿಲೀಫ್‌.. ಜಾಮೀನು ಮಂಜೂರು

Share with

ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಮಂದಿ ಜೈಲುವಾಸ ಅನುಭವಿಸುತ್ತಿದ್ದರು. ಆದರೆ ಇಬ್ಬರು ಆರೋಪಿಗಳಿಗೆ ಕೋರ್ಟ್​ ಜಾಮೀನು ನೀಡಿದೆ. ಈ ಬಾರಿಯಾದರೂ ಜಾಮೀನು ಪಡೆಯಬೇಕು ಅಂತ ಹಂಬಲಿಸುತ್ತಿದ್ದ ಪವಿತ್ರಾ ಗೌಡ ಹಾಗೂ ದರ್ಶನ್​ಗೆ ನಿರಾಸೆ ಆಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ದರ್ಶನ್​ ಎ2 ಆಗಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್ 57 ಕೋರ್ಟ್ ನ್ಯಾಯಧೀಶರು ಈ ಮಹತ್ವದ ತೀರ್ಪು ನೀಡಿದ್ದಾರೆ.

ಇನ್ನು, 17 ಆರೋಪಿಗಳಲ್ಲಿ ಇಲ್ಲಿಯವರೆಗೆ 5 ಜನಕ್ಕೆ ಮಾತ್ರ ಕೋರ್ಟ್​ ಜಾಮೀನು ನೀಡಿದೆ. ಅವರಲ್ಲಿ ರವಿಶಂಕರ್ ಹಾಗೂ ದೀಪಕ್ ಕುಮಾರ್​ಗೆ ಮಾತ್ರ ಇಂದು ಜಾಮೀನು ಸಿಕ್ಕಿದೆ. ಒಟ್ಟಾರೆಯಾಗಿ ಕಾರ್ತಿಕ್, ನಿಖಿಲ್, ಕೇಶವ ಮೂರ್ತಿ ರವಿಶಂಕರ್ ಹಾಗೂ ದೀಪಕ್ ಕುಮಾರ್​ಗೆ ಕೋರ್ಟ್​ನಿಂದ ಜಾಮೀನು ಸಿಕ್ಕಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಈ ಮೇಲಿನ ಐವರು ಕೂಡ ಭಾಗಿಯಾಗಿದ್ದರು. ಎ8 ರವಿ ಶಂಕರ್​, ಎ13 ದೀಪಕ್, ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ಆರೋಪಿಗಳಾಗಿದ್ದರು. ಇವರ ಪೈಕಿ ಉಳಿದ ಎ1 ಪವಿತ್ರಾ ಗೌಡ, ಎ2 ನಟ ದರ್ಶನ್, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ9 ಧನರಾಜ್, ಎ10 ವಿನಯ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ14 ಪ್ರದೂಶ್ ಸೇರಿದಂತೆ 12ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ.


Share with

Leave a Reply

Your email address will not be published. Required fields are marked *