BPL ಕಾರ್ಡ್​​ದಾರರಿಗೆ ಬಿಗ್ ಶಾಕ್..! APLಗೆ 4 ಲಕ್ಷಕ್ಕೂ ಅಧಿಕ ಕಾರ್ಡ್ ವರ್ಗಾವಣೆ..!!

Share with

ರಾಜ್ಯದಲ್ಲಿ ರೇಷನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ BPL (Below Poverty Line) ರೇಷನ್ ವಿತರಣೆ ಮಾಡಲಾಗುತ್ತದೆ. ಆದ್ರೆ ಉಳ್ಳವರು, ಸಿರಿವಂತರ ಹೆಸರಲ್ಲೂ ಬಿಪಿಎಲ್​ ಕಾರ್ಡ್​​ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಇಲಾಖೆ ಅಕ್ರಮ ಕಾರ್ಡ್​ದಾರರಿಗೆ ಬ್ರೇಕ್ ಹಾಕಿದೆ. 4 ಲಕ್ಷಕ್ಕೂ ಅಧಿಕ ಬಿಪಿಎಲ್​​ ಕಾರ್ಡ್​ಗಳು ಎಪಿಎಲ್​​ಗೆ ವರ್ಗಾವಣೆಗೊಂಡಿದೆ.

BPL ಕಾರ್ಡ್​​ದಾರರಿಗೆ ಬಿಗ್ ಶಾಕ್
ಅಕ್ರಮ ಬಿಪಿಎಲ್ ಕಾರ್ಡ್​​ದಾರರ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ತೀವ್ರಗೊಂಡಿದೆ. ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಹೊಂದಿರುವವರನ್ನ ಪತ್ತೆ ಮಾಡಿ ಪಡಿತರ ಚೀಟಿ ರದ್ದು ಗೊಳಿಸುವಂತೆ ಸರ್ಕಾರ ಖಡಕ್ ಆದೇಶ ನೀಡಿತ್ತು. ಅದರಂತೆ ಕಾರ್ಯಾಚರಣೆ ಇಳಿದ ಅಧಿಕಾರಿಗಳು ಬಿಪಿಎಲ್​ ಕಾರ್ಡ್​ ಹೊಂದಿರುವವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

BPL ನಿಂದ APLಗೆ 4 ಲಕ್ಷಕ್ಕೂ ಅಧಿಕ ಕಾರ್ಡ್ ವರ್ಗಾವಣೆ
ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್ ಗಳು ರದ್ದುಗೊಳಿಸಲಾಗಿದೆ. ಇನ್ನು 4 ಲಕ್ಷಕ್ಕೂ ಅಧಿಕ ಕಾರ್ಡ್​ಗಳು ಬಿಪಿಎಲ್​​ನಿಂದ ಎಪಿಎಲ್​​ಗೆ ವರ್ಗಾವಣೆಗೊಂಡಿದೆ. ಜೊತೆಗೆ 5,632 ಬಿಪಿಎಲ್ ಕಾರ್ಡ್​ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕ ಅಮಾನತು ಮಾಡಲಾಗಿದೆ.

14 ಲಕ್ಷ ಅಕ್ರಮ ಫಲಾನುಭವಿಗಳಿಗೆ ಶಾಕ್​

ಮತ್ತೊಂದೆಡೆ ಬರೋಬ್ಬರಿ 3.90 ಲಕ್ಷ ಬಿಪಿಎಲ್ ಕಾರ್ಡ್​ಗಳು ಎಪಿಎಲ್ ಕಾರ್ಡ್ ಗಳಾಗಿ ಬದಲಾವಣೆಗೊಂಡಿದೆ. ಒಟ್ಟು 4.10 ಲಕ್ಷ ಬಿಪಿಎಲ್ ಕಾರ್ಡ್​ದಾರರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿದೆ. ಈ ಮೂಲಕ 14 ಲಕ್ಷ ಅಕ್ರಮ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಾಕ್ ನೀಡಿದೆ.

03/09/2025 – 14/12/2025 ವರೆಗಿನ ಆಹಾರ ಇಲಾಖೆಯ ಕಾರ್ಯಾಚರಣೆಯ ಅಂಕಿ ಅಂಶದ ಪ್ರಕಾರ ಸದ್ಯ ರಾಜ್ಯದಲ್ಲಿರುವ ಒಟ್ಟು ರೇಷನ್ ಕಾರ್ಡ್ ಗಳ ಸಂಖ್ಯೆ 1,53,65,889 ಇದೆ. ಸದ್ಯ 1,13,56,089 ಬಿಪಿಎಲ್ ಕಾರ್ಡ್​​ಗಳು ಚಾಲ್ತಿಯಲ್ಲಿದ್ದು, ಸದ್ಯ ಚಾಲ್ತಿಯಲ್ಲಿರುವ ಅಂತ್ಯೋದಯ ಕಾರ್ಡ್ ಗಳ ಸಂಖ್ಯೆ 42,94,924 ಇದೆ.


Share with

Leave a Reply

Your email address will not be published. Required fields are marked *