ಮಹಿಳಾ ಆಯೋಗದ ನೋಟಿಸ್​ಗೆ ಬೆಚ್ಚಿಬಿತ್ತಾ..ಬಿಗ್ ಬಾಸ್..!!? ಸ್ವರ್ಗ ನರಕ ಆಟಕ್ಕೆ ಬ್ರೇಕ್​..!! ಏನಿದು ಟ್ವಿಸ್ಟ್…!

Share with

ಕನ್ನಡದ ಬಿಗ್​ಬಾಸ್​ ಸೀಸನ್​ 11 ಹೊಸ ಕಾನ್ಸೆಪ್ಟ್​ ಸ್ವರ್ಗ- ನರಕ ಮಹಿಳಾ ಆಯೋಗದ ಕೋಪಕ್ಕೆ ಗುರಿಯಾಗಿದೆ. ಇದೇ ಕಾರಣದಿಂದ ಸ್ವರ್ಗ- ನರಕಕ್ಕೆ ಬ್ರೇಕ್​ ಹಾಕಲಾಗಿದೆ. ಸ್ವರ್ಗ – ನರಕ ಹೆಸರಿನಲ್ಲಿ ಸ್ಪರ್ಧಿಗಳ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗುತ್ತಿರುವುದಾಗಿ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಹಿಳೆಯರ ಖಾಸಗಿ ತನ್ನಕ್ಕೆ ಧಕ್ಕೆಯಾಗುತ್ತಿದೆ. ಊಟ ಹಾಗೂ ಶೌಚಾಲಯದ ವಿಚಾರವಾಗಿ ನರಕ ವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ಆಯೋಗಕ್ಕೆ ದೂರು ಬಂದ ಹಿನ್ನೆಲೆಯಲ್ಲಿ, ಮಹಿಳಾ ಆಯೋಗ ಬಿಗ್ ಕಾರ್ಯಕ್ರಮ ಆಯೋಜಕರು ಹಾಗೂ ಕಲರ್ಸ್ ವಾಹಿನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇದೇ ಕಾರಣದಿಂದಾಗಿ ಈಗ ಸ್ವರ್ಗ ಮತ್ತು ನರಕಕ್ಕೆ ಬ್ರೇಕ್​ ಹಾಕಲಾಗಿದೆ. ನೋಟಿಸ್​ ನೀಡಿದ್ದ ಮಹಿಳಾ ಆಯೋಗವು, ದೂರಿನ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ರಾಮನಗರ ಪೊಲೀಸರಿಗೆ ಮಹಿಳಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತ ಬಿಗ್ ಬಾಸ್ ಕಾರ್ಯ ಆಯೋಜಕರು ಬಿಗ್ ಬಾಸ್ ಕಾರ್ಯಕ್ರಮದ ಸ್ವರ್ಗ ನರಕ ಕಾನ್ಸೆಪ್ಟ್ ಕೊನೆಗಾಣಿಸಿದ್ದಾರೆ. ಸ್ಪರ್ಧಿಗಳಿಗೆ ಸೂಚನೆ ಸಿಗದಂತೆ ಸ್ವರ್ಗ – ನರಕವಾಗಿ ಇಬ್ಭಾಗವಾಗಿದ್ದನ್ನು ಒಟ್ಟುಗೂಡಿಸಿ ಒಂದೇ ಮನೆಯನ್ನಾಗಿಸಿದ್ದಾರೆ. ಬಿಗ್ ಬಾಸ್ ಮನೆಯ ಮಧ್ಯಭಾಗದಲ್ಲಿದ್ದ ಕಬ್ಬಿಣದ ಸರಳನ್ನು ತೆರವುಗೊಳಿಸಿದ್ದಾರೆ. ಈ ಬಾರಿಯ ಬಿಗ್​ಬಾಸ್​​ನಲ್ಲಿ ಹೈಲೈಟ್ ಆಗಿದ್ದೇ ಸ್ವರ್ಗ ಮತ್ತು ನರಕ. ಒಂದಿಷ್ಟು ಮಂದಿಯನ್ನು ಸ್ವರ್ಗಕ್ಕೆ, ಮತ್ತೊಂದಿಷ್ಟು ಮಂದಿಯನ್ನು ನರಕಕ್ಕೆ ಕಳುಹಿಸಲಾಗಿತ್ತು.

ಈಗ ನೋಟಿಸ್​ಗೆ ಹೆದರಿ ವಿಭಿನ್ನ ರೀತಿಯಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್​ ತೆಗೆದು ಹಾಕಲಾಗಿದೆ. ಕ್ರೇನ್​ ಮೂಲಕ ಮನೆ ಒಳಗೆ ಬಂದ ಮುಸುಕುಧಾರಿಗಳು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಪೂರ್ಣಗೊಂಡಿದೆ. ಮಾಮೂಲಿನ ಬಿಗ್​ಬಾಸ್​ನಂತೆ, ಎಲ್ಲರೂ ಒಟ್ಟಾಗಿ ಸ್ಪರ್ಧೆ ಮುಂದುವರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಈ ಹಿಂದಿನ ಸೀಸನ್​ಗಳಲ್ಲಿ ಇದೇ ರೀತಿ ಸಮರ್ಥರು ಹಾಗೂ ಅಸಮರ್ಥರು ಹೆಸರಿನ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ವಾರ ಈ ಆಟ ನಡೆದಿತ್ತು. ಸಮರ್ಥರಿಗೆ ಮನೆಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಮಾತ್ರವಲ್ಲದೇ ಮನೆಯ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು. ಸಾಮಾನ್ಯ ಬಟ್ಟೆ ಹಾಕಿಕೊಳ್ಳಲು ಅವಕಾಶ ನೀಡಲಾಗಿತ್ತು.


Share with

Leave a Reply

Your email address will not be published. Required fields are marked *